ಗಾಯನ ಗಂಗಾ ಟ್ರಸ್ಟ್‌ನ ದಶಮಾನೋತ್ಸವದ ಪ್ರಯುಕ್ತ “ಹಾಡುಕೋಗಿಲೆ ಗೀತೋತ್ಸವ 2017′ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂಗವಾಗಿ ವಾರ್ಷಿಕ ಪ್ರಶಸ್ತಿ ಪ್ರದಾನ, ಸಮೂಹ ಗಾಯನ ಹಾಗೂ “ಭಾವ ಸುನೀತ’ ಗೀತ ಗಾಯನ ನಡೆಯಲಿದೆ.
ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಲಿದ್ದು, ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸರಾಂತ ಗಾಯಕಿ ಸುನೀತಾ ಅನಂತಸ್ವಾಮಿ ಅವರಿಗೆ “ಸ್ವರ ಸಾಮ್ರಾಜಿn’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮೈಸೂರು ಅನಂತಸ್ವಾಮಿ ಅವರ ಧರ್ಮಪತ್ನಿ ಶಾಂತಾ ಅನಂತಸ್ವಾಮಿ ಉಪಸ್ಥಿತರಿರಲಿದ್ದಾರೆ.
ಸವಿಗಾನ ಲಹರಿ ಸಂಗೀತ ಶಾಲೆ, ರಂಗ ಸಂಸ್ಥಾನ, ಗಾಯನ ಗಂಗಾ, ಭಾವಸಾಗರ, ಇಂಚರ ಸುಗಮ ಸಂಗೀತ ಸಂಸ್ಥೆಯವರಿಂದ ವೃಂದಗಾನ ನಡೆಯಲಿದೆ. ನಂತರ ಸುನೀತಾ ಅನಂತಸ್ವಾಮಿ ಮತ್ತು ತಂಡದವರಿಂದ “ಭಾವ ಸುನೀತ’ ಕಾರ್ಯಕ್ರಮ ನಡೆಯಲಿದೆ. ಸುಗಮಸಂಗೀತ ಪ್ರಿಯರಿಗಿದು ರಸದೌತಣವಾಗುವುದರಲ್ಲಿ ಅನುಮಾನವೇ ಇಲ್ಲ.
ಎಲ್ಲಿ?: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ.ರಸ್ತೆ
ಯಾವಾಗ?: ನವೆಂಬರ್ 5, ಸಂಜೆ 5