Advertisement

Singham: ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುತ್ತಿದ್ದ “ಸಿಂಗಂ” ನಟ ಹೃದಯಾಘಾತದಿಂದ ಮೃತ್ಯು

12:07 PM Dec 13, 2023 | Team Udayavani |

ಮುಂಬೈ: ಬಾಲಿವುಡ್‌ ನ ಸಿಂಗಂ ಸೇರಿದಂತೆ ಹಲವಾರು ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ರವೀಂದ್ರ ಬೆರ್ಡೆ (78ವರ್ಷ) ಬುಧವಾರ (ಡಿಸೆಂಬರ್‌ 13) ಹೃದಯಾಘಾತದಿಂದ ನಿಧನರಾಗಿರುವುದಾಗಿ ವರದಿ ತಿಳಿಸಿದೆ.

Advertisement

ಮುಂಬೈನ ಆಸ್ಪತ್ರೆಯಲ್ಲಿ ಗಂಟಲು ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಬೆರ್ಡೆ ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ. ರವೀಂದ್ರ ಬಿರ್ಡೆ ಹಿರಿಯ ನಟ ದಿ.ಲಕ್ಷ್ಮಿಕಾಂತ್‌ ಬೆರ್ಡೆ ಅವರ ಸಹೋದರ.

ವರದಿಯ ಪ್ರಕಾರ, ಕೆಲವು ತಿಂಗಳ ಹಿಂದೆ ಬೆರ್ಡೆ ಅವರಿಗೆ ಗಂಟಲು ಕ್ಯಾನ್ಸರ್‌ ಆಗಿರುವುದು ಪತ್ತೆಯಾಗಿತ್ತು. ನಂತರ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಅವರು ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಿದ್ದರು. ಆದರೆ ಬುಧವಾರ ದಿಢೀರನೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ.

ರವೀಂದ್ರ ಬೆರ್ಡೆ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಮುಂಬೈನಲ್ಲಿ ಬೆರ್ಡೆ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next