Advertisement

ಗಾಯಕಿ ಸಬಿತಾ ಚೌಧರಿ ಇನ್ನಿಲ್ಲ

03:55 AM Jun 30, 2017 | Karthik A |

ಕೋಲ್ಕತಾ: ಖ್ಯಾತ ಹಾಡುಗಾರ್ತಿ ಸಬಿತಾ ಚೌಧರಿ(72) ಜೂನ್‌ 29ರಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚೌಧರಿ ಅವರು ಜನವರಿಯಿಂದ ಮುಂಬೈನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಒತ್ತಾಸೆ ಮೇರೆಗೆ ಮೇ ತಿಂಗಳಲ್ಲಿ ಮನೆಗೆ ಕರೆತಂದಿದ್ದೆವು ಎಂದು ಅವರ ಮಗಳು ಹೇಳಿದ್ದಾರೆ. ಚೌಧರಿ ಖ್ಯಾತ ಸಂಗೀತಗಾರ ಸಲೀಲ್‌ ಚೌಧರಿ ಅವರ ಪತ್ನಿ. ಹಲವಾರು ಜನಪ್ರಿಯ ಬಂಗಾಳಿ, ಹಿಂದಿ ಹಾಡುಗಳು ಇವರ ದನಿಯಲ್ಲಿ ಮೂಡಿಬಂದಿವೆ. ಇವರ ನಿಧನಕ್ಕೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next