Advertisement
ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಮಣಿಕಾ ಬಾತ್ರಾ-ಜಿ. ಸಥಿಯನ್ ಜಪಾನ್ನ ಹಿನಾ ಹಯಾಟಾ-ಟೊಮೊಕಾಝ ಹರಿಮೊಟೊ ವಿರುದ್ಧ 2-3 ಅಂತರದ ಸೋಲನುಭವಿಸಿದರು (9-11, 9-11, 11-8, 11-5, 7-11). ಜಪಾನ್ ಜೋಡಿ ಹಾಲಿ ವಿಶ್ವ ಚಾಂಪಿಯನ್ಶಿಪ್ ರನ್ನರ್ ಅಪ್ ಆಗಿದೆ.
ವನಿತಾ ಡಬಲ್ಸ್ನಲ್ಲಿ ಮಣಿಕಾ ಬಾತ್ರಾ-ಅರ್ಚನಾ ಕಾಮತ್ ಅವರನ್ನು ಚೀನದ ಮೆಂಗ್ ಚೆನ್-ಯಿದಿ ವಾಂಗ್ 3-2ರಿಂದ ಮಣಿಸಿತು. ಮಣಿಕಾ ಬಾತ್ರಾ, ಜಿ. ಸಥಿಯನ್ ಮತ್ತು ಅಚಂತ ಶರತ್ ಕಮಲ್ ಸಿಂಗಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.