Advertisement

ಸಿಂಗಾಪುರ: ಒಂದಾಗುತ್ತಿರುವ ಸ್ನೇಹಿತರು, ಪ್ರೇಮಿಗಳು!

12:42 PM Jun 20, 2020 | mahesh |

ಸಿಂಗಾಪುರ: ಸುಮಾರು ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ದೂರ ದೂರವೇ ಉಳಿದಿದ್ದ ಸಿಂಗಾಪುರದ ಸ್ನೇಹಿತರು, ಪ್ರೇಮಿಗಳು ಶುಕ್ರವಾರ ಮತ್ತೆ ಜತೆಯಾಗಿದ್ದಾರೆ. ಶಾಂಪಿಂಗ್‌, ರೆಸ್ಟೋರಂಟ್‌ಗಳಲ್ಲಿ ಊಟ, ಚಾಹ ಸಹಿತ ಬೇಕಾದ ತಿಂಡಿ ತಿನಸುಗಳನ್ನು ಸವಿದು ಸಂಭ್ರಮಿಸಿದರು.

Advertisement

ಕೋವಿಡ್ ವೈರಸ್‌ ವ್ಯಾಪಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸುಮಾರು ಎರಡು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ದೇಶದಲ್ಲಿ ಜಾರಿಗೊಳಿಸಿದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಶುಕ್ರವಾರದಿಂದ ಶಾಪಿಂಗ್‌ ಮಾಲ್‌, ರೆಸ್ಟೋರಂಟ್‌ಗಳು ತೆರೆದುಕೊಂಡಿವೆ. ಸಾರ್ವಜನಿಕರ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಪರಿಣಾಮ ಜನರು ತಮ್ಮ ಸ್ನೇಹಿತರೊಂದಿಗೆ ಬಹುಕಾಲದ ಅನಂತರ ಸುತ್ತಾಡಿ ಖುಷಿ ಪಡುವಂತಾಗಿದೆ. ಹೊಟೇಲ್‌ – ರೆಸ್ಟೋರೆಂಟ್‌ಗಳಲ್ಲಿ ತಿಂಡಿಗಳನ್ನು ಪಾರ್ಸೆಲ್‌ ಮತ್ತು ಹೋಮ್‌ ಡೆಲಿವರಿ ನೀಡಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಇದೀಗ ರೆಸ್ಟೋರೆಂಟ್‌ಗಳಲಿಗೆ ಜನರ ಪ್ರವೇಶಿಸಲು ಅವಕಾಶ ನೀಡಿದ್ದರಿಂದ ಪ್ರತಿ ಟೇಬಲ್‌ಗ‌ಳ ಮಧ್ಯೆ ಪ್ಲಾಸ್ಟಿಕ್‌ ಪರದೆಗಳನ್ನು ಅಳವಡಿಸಲಾಗಿತ್ತು. ಅಂಗಡಿಗಳು ಮತ್ತು ಶಾಪಿಂಗ್‌ ಮಾಲ್‌ಗ‌ಳಲ್ಲೂ ಸಾಮಾಜಿಕ ಅಂತರ ಕಾಪಾಡಲು ಹಳದಿ ಟೇಪ್‌ಗ್ಳನ್ನು ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.

ಸಿಂಗಾಪುರದಲ್ಲಿ ಲಾಕ್‌ಡೌನ್‌ ಹಂತಗಳಲ್ಲಿ ಸಡಿಲಗೊಳಿಸಲಾಗಿದೆ. ಮೊದಲನೆ ಯದಾಗಿ ಜೂನ್‌ ಆರಂಭದಲ್ಲಿ ಶಾಲೆಗಳು ಪುನರಾರಂಭಗೊಂಡವು. ಜಿಮ್‌ಗಳು, ಉದ್ಯಾನವನಗಳು ಮತ್ತು ಕಡಲತೀರಗಳು ಈಗ ಮತ್ತೆ ತೆರೆಯಲಾಯಿತು. ಆದರೆ ಧಾರ್ಮಿಕ ಸಭೆಗಳು, ಬಾರ್‌ಗಳು, ಚಿತ್ರಮಂದಿರಗಳು ಮತ್ತು ಬೃಹತ್‌ ಪ್ರಮಾಣದಲ್ಲಿ ಜನ ಸೇರುವ ಕಾರ್ಯ ಕ್ರಮಗಳ ಆಯೋಜನಗೆ ಇನ್ನೂ ಅವಕಾಶ ನೀಡಿಲ್ಲ.

ಸಿಂಗಾಪುರದಲ್ಲಿ ಈ ವರೆಗೆ 41,615 ಕೊರೊನಾ ವೈರಸ್‌ ಸೋಂಕು ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 26 ಮಂದಿ ಮೃತಪಟ್ಟಿದ್ದು, 32,241 ಮಂದಿ ಗುಣಮುಖರಾಗಿದ್ದಾರೆ. 8,877 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next