Advertisement
ಈ ಋತುವಿನಲ್ಲಿ ಸಿಂಧು ಗಮ ನಾರ್ಹ ಪ್ರದರ್ಶನ ನೀಡಿದ್ದು 2 ಪಂದ್ಯಾವಳಿಗಳಲ್ಲಿ ಮಾತ್ರ. ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ನಲ್ಲಿ ಫೈನಲ್ ಹಾಗೂ ಮಲೇಷ್ಯಾ ಮಾಸ್ಟರ್ನಲ್ಲಿ ಸೆಮಿಫೈನಲ್ ತಲುಪಿದ್ದರು. ಆದರೆ ಥಾಯ್ಲೆಂಡ್ ಓಪನ್‌ನಲ್ಲಿ ಕೆನಡಾದ ಮೈಕಲ್ ಲೀ ವಿರುದ್ಧ ಅನುಭವಿಸಿದ ಮೊದಲ ಸುತ್ತಿನ ಸೋಲು ಸಿಂಧು ಅವರನ್ನು ಕಂಗೆಡಿಸಿದೆ. ಹೀಗಿರುವಾಗಲೇ ಸಿಂಗಾಪುರಲ್ಲಿ ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು ಎದುರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
Related Articles
ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್.ಎಸ್. ಪ್ರಣಯ್ ಥಾಯ್ಲೆಂಡ್ ಬ್ರೇಕ್ ಬಳಿಕ ಸಿಂಗಾಪುರದಲ್ಲಿ ಆಡಲಿ ಳಿಯಲಿದ್ದಾರೆ. ಇವರಿಗೂ ಇಲ್ಲಿ ಮೊದಲ ಸುತ್ತಿನಲ್ಲೇ ಕಠಿನ ಸವಾಲು ಎದುರಾಗಿದೆ. ಜಪಾನ್‌ನ ತೃತೀಯ ಶ್ರೇಯಾಂಕಿತ ಆಟಗಾರ ಕೋಡೈ ನರವೋಕ ವಿರುದ್ಧ ಸೆಣಸಬೇಕಿದೆ.
Advertisement
ಥಾಯ್ಲೆಂಡ್‌ನಲ್ಲಿ ಸೆಮಿಫೈನಲ್ ತನಕ ಮುನ್ನಡೆದ ಲಕ್ಷ್ಯ ಸೇನ್ “ಮಿಸ್ಟರ್ ಕನ್ಸಿಸ್ಟೆಂಟ್’ ಖ್ಯಾತಿಯ, ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕೆ. ಶ್ರೀಕಾಂತ್ ಥಾಯ್ಲೆಂಡ್‌ನ ಕಾಂತಾ ಫೊನ್ ವಾಂಗ್‌ಶೆರೋನ್ ವಿರುದ್ಧ, ಪ್ರಿಯಾಂಶು ರಾಜಾವತ್ ಜಪಾನ್‌ನ ಕಾಂಟ ಸುನೆಯಾಮ ವಿರುದ್ಧ ಆಡುವರು. ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಎಂ.ಆರ್. ಅರ್ಜುನ್-ಧ್ರುವ ಕಪಿಲ, ಗಾಯತ್ರಿ ಗೋಪಿಚಂದ್-ಟ್ರೀಸಾ ಜಾಲಿ ಕಣದಲ್ಲಿದ್ದಾರೆ.