Advertisement

ಸಿಂಗಾಪುರ ; ತೇಲುವ ಸೌರ ವಿದ್ಯುತ್‌ ಸ್ಥಾವರ

12:11 AM Mar 12, 2021 | Team Udayavani |

ಹವಾಮಾನ ಬದಲಾವಣೆ ಜಗತ್ತು ಎದುರಿಸುತ್ತಿ ರುವ ಬಲುದೊಡ್ಡ ಸಮಸ್ಯೆಯಾಗಿದೆ.  ಇದರಿಂದಾಗಿ ನಾನಾ ತೆರನಾದ ಪ್ರಕೃತಿ ವಿಕೋಪಗಳು ಸಂಭವಿ ಸುತ್ತಿವೆ. ಇದನ್ನು ಸಿಂಗಾಪುರ ಗಂಭೀರವಾಗಿ ಪರಿಗಣಿ ಸಿದ್ದು ಹಸುರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯಲು ತೇಲುವ ಸೌರ ವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸಲು ಮುಂದಡಿ ಇಟ್ಟಿದೆ.

Advertisement

ಸಿಂಗಾಪುರ ವಿಶ್ವದ ಅತೀ ಚಿಕ್ಕ ದೇಶಗಳಲ್ಲಿ ಒಂದಾಗಿದ್ದರೂ ಏಷ್ಯಾದ ಅತೀ ದೊಡ್ಡ ಮತ್ತು ಸಮೃದ್ಧ ಆರ್ಥಿಕ ಕೇಂದ್ರವಾಗಿದೆ. ಜಲವಿದ್ಯುತ್‌ , ಪವನ ವಿದ್ಯುತ್‌ ಉತ್ಪಾದನೆಗೆ ಇಲ್ಲಿ ಅವಕಾಶ ಇಲ್ಲ.  ಈ ಹಿನ್ನೆಲೆಯಲ್ಲಿ ಸಿಂಗಾಪುರ ಸೌರಶಕ್ತಿಯತ್ತ ದೃಷ್ಟಿ ನೆಟ್ಟಿದ್ದು, ತನ್ನ ಕರಾವಳಿ ಮತ್ತು ಜಲಾಶಯಗಳಲ್ಲಿ ಸೌರ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಶೂನ್ಯ ಹೊರಸೂಸುವಿಕೆ ಗುರಿ ದೇಶವು 2030ರ ವೇಳೆಗೆ ಹಸುರುಮನೆ ಅನಿಲ ಹೊರಸೂಸುವಿಕೆಯನ್ನು ಅರ್ಧಕ್ಕೆ ಇಳಿಸುವ ಗುರಿ ಇಟ್ಟುಕೊಂಡಿದೆ. 2050ರ ವೇಳೆಗೆ ಇದನ್ನು ಶೂನ್ಯಕ್ಕೆ ಇಳಿಸುವ ಸಂಕಲ್ಪ ತೊಟ್ಟಿದೆ.

ಎಷ್ಟು ಫ‌ಲಕ?:

13,000 ಸೌರ ಫ‌ಲಕಗಳನ್ನು ಸಮುದ್ರದ ಮೇಲ್ಮೆ„ಯಲ್ಲಿ ಅಳವಡಿಸಲಾಗಿದ್ದು, ಇದು 5 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಿದೆ. ಇದರಿಂದ ಇಡೀ ವರ್ಷ 1,400 ವಸತಿ ಸಮುಚ್ಚಯಗಳಿಗೆ ವಿದ್ಯುತ್‌ ಪೂರೈಸಬಹುದಾಗಿದೆ. ಚೀನದಿಂದ ಸೌರ ಫ‌ಲಕಗಳನ್ನು ಆಮದು ಮಾಡಿಕೊಂಡು ಕಾಂಕ್ರೀಟ್‌ ಬ್ಲಾಕ್‌ಗಳೊಂದಿಗೆ ಜಲಾಶಯದ ನೆಲಕ್ಕೆ ಲಂಗರು ಹಾಕಲಾಗುತ್ತದೆ.

Advertisement

ಪರಿಸರಸ್ನೇಹಿ ಸಿಂಗಾಪುರ:

ದೇಶದಲ್ಲಿ ಸೌರ ಶಕ್ತಿಗಾಗಿ ಕಟ್ಟಡಗಳ ಮೇಲ್ಛಾವಣಿಗಳನ್ನು ಮತ್ತು ಲಭ್ಯವಿರುವ ಭೂಮಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. ಸರಕಾರವು ರೂಪಿಸಿರುವ ಸಮಗ್ರ ಹಸುರು ಯೋಜನೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದು, ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಎಲೆಕ್ಟ್ರಿಕ್‌ ಕಾರುಗಳ ಬಳಕೆಯನ್ನು ಉತ್ತೇಜಿಸಲು ಹೆಚ್ಚಿನ ಚಾರ್ಜಿಂಗ್‌ ಪಾಯಿಂಟ್‌ಗಳ ನಿರ್ಮಾಣ ಸೇರಿವೆ.

 ಇಂಧನದ ಬದಲು ಸೌರಶಕ್ತಿ ಬಳಕೆ:

ಸೆಂಕಾರ್ಪ್‌ ಮತ್ತು ರಾಷ್ಟ್ರೀಯ ಜಲ ಸಂಸ್ಥೆ ಸಾರ್ವಜನಿಕ ಉಪಯು ಕ್ತತೆಗಳ ಮಂಡಳಿಯು ಅಭಿವೃದ್ಧಿಪಡಿಸಿದ ಈ ಯೋಜ ನೆಯು ಸಿಂಗಾಪುರದ ನೀರಿನ ಸಂಸ್ಕರಣ ಘಟಕಗಳಿಗೆ ವ್ಯಯಿಸುವ ಇಂಧನದ ಬದಲು ಸೌರಶಕ್ತಿಯನ್ನು ಬಳಸಲು ನೆರವಾಗುತ್ತದೆ. ಈ ಘಟಕಗಳು 7,000 ಕಾರು ಗಳಿಗೆ ಬೇಕಾಗುವ ಇಂಧನದ ಆವಶ್ಯಕತೆ ಹೊಂದಿದ್ದವು. ಆದರೆ ಈಗ ಅವುಗಳಿಗೆ ಸೌರ ವಿದ್ಯುತ್‌ ನೀಡಲಾದ ಕಾರಣ 7,000 ಕಾರುಗಳು ಹೊರ ಉಗುಳುವ ಪ್ರಮಾ ಣದ ಇಂಗಾಲಕ್ಕೆ ಕಡಿವಾಣ ಹಾಕಿದಂತಾಗುತ್ತದೆ.

 45 ಫ‌ುಟ್‌ಬಾಲ್‌  ಪಿಚ್‌ಗಳ ಗಾತ್ರ! :

ತೆಂಗೇ ಜಲಾಶಯದಲ್ಲಿಯೂ ಇದಕ್ಕೆ ಪೂರಕ ವಾದ ಯೋಜನೆ ರೂಪಿಸಲಾಗುತ್ತಿದೆ. 1,22,000 ಫ‌ಲಕಗಳ ಸೌರ ಫಾರ್ಮ್ ರಚನೆಯಾಗಲಿದೆ. ಅಂದರೆ ಇದು ಆಗ್ನೇಯ ಏಷ್ಯಾದ 45 ಫ‌ುಟ್‌ಬಾಲ್‌ ಪಿಚ್‌ಗಳ ಗಾತ್ರದಷ್ಟು ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next