Advertisement

ಭಾರತೀಯ ಮೂಲದವನ ಮರಣದಂಡನೆಗೆ ತಡೆ ನೀಡಿದ ಸಿಂಗಾಪುರ ನ್ಯಾಯಾಲಯ

07:37 PM Nov 09, 2021 | Team Udayavani |

ಸಿಂಗಾಪುರ : ಮಾದಕ ವಸ್ತು ಪ್ರಕರಣದಲ್ಲಿ ಸಿಂಗಾಪುರದಲ್ಲಿ ಮರಣ ದಂಡನೆ ಶಿಕ್ಷಗೆ ಒಳಗಾಗಬೇಕಿದ್ದ ಭಾರತೀಯ-ಮಲೇಷಿಯನ್‌ ವ್ಯಕ್ತಿಯ ಶಿಕ್ಷೆಗೆ ನ್ಯಾಯಾಲಯ ತಡೆ ನೀಡಿದೆ.

Advertisement

ಅಪರಾಧಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆಗ ತಡೆ ನೀಡಲಾಗಿದೆ. ನಾಗೇಂದ್ರನ್‌ ಕೆ ಮುರುಳೀಧರನ್‌(33) ಹೆಸರಿನ ವ್ಯಕ್ತಿ 2009ರಲ್ಲಿ ಸಿಂಗಾಪುರಕ್ಕೆ 42.72ಕೆಜಿ ಹೆರಾಯಿನ್‌ ಅನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ.

ಆ ಪ್ರಕರಣದ ಹಿನ್ನೆಲೆಯಲ್ಲಿ ಆತನಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದ್ದು, ನ.10ರಂದು ಚಾಂಗೈನ ಜೈಲಿನಲ್ಲಿ ಆತನನ್ನು ಗಲ್ಲಿಗೇರಿಸಲು ಸಮಯ ನಿಗದಿಸಲಾಗಿತ್ತು. ಈ ಮಧ್ಯೆ ಆತನಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮರಣದಂಡನೆ ಮುಂದೂಡಲು ಸಿಂಗಾಪುರ ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ : ಮನೆ ಬಿಟ್ಟು ಬಂದಿದ್ದ ಕಂದಮ್ಮಳನ್ನು ಸ್ಥಳೀಯರ ಸಹಕಾರದಲ್ಲಿ ಪೋಷಕರಿಗೆ ಒಪ್ಪಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next