Advertisement

ಸಿಂಧು, ಶ್ರೀಕಾಂತ್‌, ಸೈನಾ “ಟಾಪ್ಸ್‌’ಗೆ ಆಯ್ಕೆ​​​​​​​

12:30 AM Feb 01, 2019 | |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ , ಪ್ಯಾರಾ ಒಲಿಂಪಿಕ್ಸ್‌ ಹಾಗೂ 2024ರ ಒಲಿಂಪಿಕ್ಸ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಬ್ಯಾಡ್ಮಿಂಟನ್‌ ತಾರೆಗಳಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌ ಸೇರಿದಂತೆ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ಗೆ (ಟಾಪ್ಸ್‌) ಒಟ್ಟು 23 ಆ್ಯತ್ಲೀಟ್‌ಗಳ ಆಯ್ಕೆಯನ್ನು ಅನುಮೋದಿಸಿದೆ.

Advertisement

ಇದರೊಂದಿಗೆ ಬ್ಯಾಡ್ಮಿಂಟನ್‌, ಪ್ಯಾರಾ ಆ್ಯತ್ಲೀಟ್ಸ್‌, ಪ್ಯಾರಾ ಶೂಟಿಂಗ್‌ನ ಕೆಲವು ಆ್ಯತ್ಲೀಟ್‌ಗಳನ್ನೂ 2024ರ ಒಲಿಂಪಿಕ್ಸ್‌ಗಾಗಿ ಅಭಿವೃದ್ಧಿ ಗುಂಪಿನಡಿ ಆಯ್ಕೆ ಮಾಡಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಇವರ ಪ್ರದರ್ಶನದ ಮೇಲೆ ನಿಗಾ ಇರಿಸಿ ಟಾಪ್ಸ್‌ಗೆ ಪರಿಗಣಿಸಲಾಗುತ್ತದೆ. ಯುವ ಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ದೇಶದ ಅಗ್ರ ಆ್ಯತ್ಲೀಟ್‌ಗಳಿಗೆ ಪ್ರಮುಖ ಕೂಟಗಳಲ್ಲಿ ಪಾಲ್ಗೊಳ್ಳಲು ನೆರವು ನೀಡಲು “ಟಾಪ್ಸ್‌’ ಯೋಜನೆಯನ್ನು ಜಾರಿಗೆ ತಂದಿದೆ.

ಬ್ಯಾಡ್ಮಿಂಟನ್‌ಗೆ ಆದ್ಯತೆ
ಬ್ಯಾಡ್ಮಿಂಟನ್‌ನಲ್ಲಿ ಕೆ. ಶ್ರೀಕಾಂತ್‌, ಸಮೀರ್‌ ವರ್ಮ, ಎಚ್‌.ಎಸ್‌. ಪ್ರಣಯ್‌, ಪಿ.ವಿ. ಸಿಂಧು, ಸೈನಾ ನೆಹ್ವಾಲ್‌; ಡಬಲ್ಸ್‌ ವಿಭಾಗಗಳಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿ ರೆಡ್ಡಿ-ಚಿರಾಗ್‌ ಶೆಟ್ಟಿ, ಅಶ್ವಿ‌ನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ಪ್ರಣವ್‌ ಚೋಪ್ರಾ-ಸಿಕ್ಕಿ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಮನು ಅತ್ರಿ-ಸುಮೀತ್‌ ರೆಡ್ಡಿ, ಮೇಘನಾ ಜಕ್ಕಂಪುಡಿ-ಪೂರ್ವಿಶಾ ರಾಮ್‌ ಅವರನ್ನು ಅಭಿವೃದ್ಧಿ ಗುಂಪಿಗೆ ಸೇರಿಸಲಾಗಿದೆ.

ಪ್ಯಾರಾ ಆ್ಯತ್ಲೀಟ್‌ ವಿಭಾಗದಲ್ಲಿ ವರುಣ್‌ ಭಾಟಿ, ಶರದ್‌ ಕುಮಾರ್‌, ಸಂದೀಪ್‌ ಚೌಧರಿ, ಸಮಿತ್‌, ಸುಂದರ್‌ ಸಿಂಗ್‌ ಗುರ್ಜರ್‌, ರಿಂಕು, ಅಮೀತ್‌ ಸರೋಹಾ, ವೀರೇಂದರ್‌, ಜಯಂತಿ ಬೆಹೆರಾ; ಪ್ಯಾರಾ ಶೂಟಿಂಗ್‌ನಲ್ಲಿ  ಮನೀಷ್‌ ನರ್ವಾಲ್‌, ಸಿಂಗ್‌ರಾಜ್‌, ದೀಪೇಂದರ್‌, ಅವನಿ ಲೆಖರಾ ಅವರನ್ನು ಟಾಪ್ಸ್‌ಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next