ಕೌಲಾಲಂಪುರ: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾ ವಳಿಯಲ್ಲಿ ಪಿ.ವಿ. ಸಿಂಧು ಮುನ್ನಡೆದರೆ, ಸೈನಾ ನೆಹ್ವಾಲ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.
Advertisement
ಸಿಂಧು 21-13, 21-17 ಅಂತರ ದಿಂದ ಥಾಯ್ಲೆಂಡ್ನ ಪೌರ್ಣಪವೀ ಚೊಚುವಾಂಗ್ ವಿರುದ್ಧ ಜಯ ಸಾಧಿಸಿದರು. ಸೈನಾ ನೆಹ್ವಾಲ್ಗೆ ಅಮೆರಿಕದ ಐರಿಸ್ ವಾಂಗ್ 21-11, 21-17ರಿಂದ ಆಘಾತವಿಕ್ಕಿದರು.
ಪುರುಷರ ಸಿಂಗಲ್ಸ್ನಲ್ಲಿ ಪಿ. ಕಶ್ಯಪ್ ಕೊರಿಯಾದ ಹೆವೊ ಕ್ವಾಂಗ್ ಹೀ ಅವರನ್ನು 21-12, 21-17ರಿಂದ ಕೆಡವಿ ದ್ವಿತೀಯ ಸುತ್ತಿಗೆ ಮುನ್ನಡೆದರು. ಮಿಶ್ರ ಡಬಲ್ಸ್ನಲ್ಲಿ ಬಿ. ಸುಮೀತ್ ರೆಡ್ಡಿ-ಅಶ್ವಿನಿ ಪೊನ್ನಪ್ಪ ಸೋಲಿನ ಸುಳಿಗೆ ಸಿಲುಕಿದರು.