Advertisement

ಮನೆ-ಮನೆಗೂ ನೀರು; ಆರಂಭದಲ್ಲೇ ವಿಘ್ನ!

08:08 PM Jun 18, 2021 | Team Udayavani |

ಸಿಂಧನೂರು: ಮನೆ-ಮನೆಗೂ ಶುದ್ಧ ಕುಡಿವನೀರು ಕಲ್ಪಿಸುವ ಜಲಜೀವನ್‌ ಮಿಷನ್‌ ಯೋಜನೆಅನುಷ್ಠಾನಗೊಂಡ ನಾಲ್ಕು ತಿಂಗಳಲ್ಲೇ ಪಲ್ಟಿಹೊಡೆದಿದೆ. ಎಲ್ಲೆಂದರಲ್ಲಿ ಪೈಪ್‌ ಹಾಕಿ ಕೈ ಬಿಟ್ಟನಂತರ ತಿರುಗಿ ನೋಡದ ಪರಿಣಾಮ ಕಲುಷಿತನೀರನ್ನೇ ಗ್ರಾಮಸ್ಥರು ಕುಡಿಯುವಂತಾಗಿದೆ.

Advertisement

ತಾಲೂಕಿನ ಹೊಸಳ್ಳಿ ಕ್ಯಾಂಪಿನಲ್ಲಿ ಜಲಜೀವನ್‌ಮಿಷನ್‌ ಯೋಜನೆಯಡಿ ಹಾಕಿರುವ ಪೈಪ್‌ಗಳು ಭೂಮಿ ಸೇರಿ ನಾಲ್ಕು ತಿಂಗಳು ಗತಿಸಿವೆ.ಎಲ್ಲೆಂದರಲ್ಲಿ ಸಿಸಿ ರಸ್ತೆ ಅಗೆದು ತೀವ್ರ ಗತಿಯಲ್ಲಿಪೈಪ್‌ ಹಾಕುವ ಕೆಲಸವನ್ನು ಪೂರ್ಣಗೊಳಿಸಿದಗುತ್ತಿಗೆದಾರರು, ವಾಪಸ್‌ ಕ್ಯಾಂಪಿನತ್ತ ತಿರುಗಿನೋಡಿಲ್ಲ. ಪರಿಣಾಮ ಗ್ರಾಮಸ್ಥರ ಬಹುನಿರೀಕ್ಷೆಯಯೋಜನೆ ಆರಂಭದಲ್ಲೇ ಮುಗ್ಗರಿಸಿ, ಜನರಆಕ್ರೋಶಕ್ಕೆ ಕಾರಣವಾಗಿದೆ.

ಪೈಪ್‌ ಹಾಕಿದವರು ಬರಲೇ ಇಲ್ಲ: ಹೊಸಳ್ಳಿಕ್ಯಾಂಪಿನಲ್ಲಿ ಮತದದಾರರ ಸಂಖ್ಯೆ 1200 ರಷ್ಟಿದೆ.ಇಲ್ಲಿನ ಪ್ರತಿಯೊಂದು ಮನೆಗೂ ಶುದ್ಧ ಕುಡಿವನೀರು ಕಲ್ಪಿಸಲು 42 ಲಕ್ಷ ರೂ. ಮೊತ್ತವನ್ನುನಿಗದಿಪಡಿಸಲಾಗಿದೆ. ನಾಲ್ಕು ತಿಂಗಳ ಹಿಂದೆಮುಖ್ಯರಸ್ತೆ, ಅಡ್ಡರಸ್ತೆಗಳನ್ನು ಅಗೆದು 2, 3ಇಂಚಿನ ಪೈಪ್‌ಗ್ಳನ್ನು ಹಾಕಿ, ಅರ್ಧ ಇಂಚಿನಪೈಪ್‌ಗ್ಳನ್ನು ಮನೆ ಎದುರು ತೇಲಿಸಲಾಗಿದೆ.ಜೆಸಿಬಿ, ರಸ್ತೆ ಅಗೆಯುವ ಡ್ರಿಲಿಂಗ್‌ ಮಿಷನ್‌ ಬಳಸಿ,ಒಂದೆರಡು ದಿನ ಕೆಲಸ ಮಾಡಿದ ನಂತರ ವಾಪಸ್‌ತಿರುಗಿ ನೋಡಿಲ್ಲ.

ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಿಸಿದ ಸಿಸಿ ರಸ್ತೆಗಳನ್ನು ಮನಬಂದಂತೆಅಗೆಯಲಾಗಿದ್ದು, ಅವುಗಳ ಮರು ನಿರ್ಮಾಣದಭರವಸೆ ಈಡೇರಿಲ್ಲ.ಕಾಲ್ನಡಿಗೆಯೇ ಗತಿ: ಕ್ಯಾಂಪಿನಲ್ಲಿರುವ ಕೆರೆಯಲ್ಲಿನನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಕುಡಿಯುವುದಕ್ಕೆಯೋಗ್ಯವಾಗಿಲ್ಲ. ಪ್ರಯೋಗಾಲಯದ ವರದಿಯೇಇದನ್ನು ಬಹಿರಂಗಪಡಿಸಿದೆ.

ಇದೀಗ ಗ್ರಾಮದಲ್ಲಿ ಕೆರೆಯಿದ್ದರೂ ಆ ನೀರನ್ನು ಜಾನುವಾರು ಹಾಗೂಬಳಕೆಗೆ ಉಪಯೋಗಿಸುತ್ತಿರುವ ಜನ, ಕುಡಿವನೀರಿಗಾಗಿ ಪ್ರತಿನಿತ್ಯ ಅರ್ಧ ಕಿ.ಮೀ. ದೂರದಖಾಸಗಿ ಕೆರೆಯ ದಾರಿ ಹಿಡಿಯುವಂತಾಗಿದೆ.ತಳ್ಳುವ ಬಂಡಿ ಹಿಡಿದು ನಿತ್ಯವೂ ನೀರಿಗಾಗಿ ಇಲ್ಲಿನಜನ ಬೆವರು ಸುರಿಸುವಂತಾಗಿದೆ.ಕೆರೆ ನಿರ್ಮಿಸಿದ ಮೇಲೆ ನೀರು: ಪ್ರತಿ ಮನೆಯಎದುರು ಅರ್ಧ ಇಂಚಿನ ಪೈಪ್‌ಗ್ಳನ್ನು ಹಾಕಲಾಗಿದೆ.ಇದರ ಗಾತ್ರವನ್ನು ಒಂದು ಇಂಚಿಗೆ ಹೆಚ್ಚಿಸಬೇಕುಎಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿಬಂದಿದೆ.ಈ ನಡುವೆ ಇಲ್ಲಿನ ಜನರೊಂದಿಗೆ ವಾಗ್ವಾದನಡೆಸಿದ ಜೆಇಯೊಬ್ಬರು, ಯೋಜನೆ ಅರ್ಧಕ್ಕೆನಿಲ್ಲಿಸಲು ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರೇ ದೂರುತ್ತಾರೆ.

Advertisement

ಜೀವನ್‌ ಮಿಷನ್‌ ಯೋಜನೆಅನುಷ್ಠಾನಗೊಳ್ಳಲು ಮೊದಲು ಹೊಸದಾಗಿಕೆರೆ ನಿರ್ಮಿಸಬೇಕೆಂದು ಹೇಳಲಾಗುತ್ತಿದೆ. ಆಕೆಲಸ ಇನ್ನೂ ಆರಂಭವಾಗಿಲ್ಲ. ಕಾಲಮಿತಿಯಲ್ಲಿನೀರು ಕಲ್ಪಿಸುವ ಭರವಸೆ ಕ್ಯಾಂಪಿನ ನಿವಾಸಿಗಳಲ್ಲಿಉಳಿದಿಲ್ಲ. ಹನಿ ನೀರಿಗೂ ಕ್ಯಾಂಪಿನಲ್ಲಿ ಪರದಾಟನಡೆದಿದ್ದು, ಜಲಜೀವನ್‌ ಮಿಷನ್‌ ಯೋಜನೆನೆರವಿಗೆ ಬರುವುದು ಯಾವಾಗ? ಎಂದು ಕ್ಯಾಂಪಿನನಿವಾಸಿಗಳು ಪ್ರಶ್ನಿಸಲಾರಂಭಿಸಿದ್ದಾರೆ.

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next