Advertisement

ವಾಹನದಲ್ಲಿದ್ದ ಹಣ ಕಳವು ಪ್ರಕರಣ: ಘಟನೆ ನಡೆದ ನಲ್ವತ್ತೆಂಟು ಗಂಟೆಯಲ್ಲೇ ಆರೋಪಿಗಳು ಅರೆಸ್ಟ್

01:07 PM Aug 22, 2022 | Team Udayavani |

ರಾಯಚೂರು : ವಾಹನದಲ್ಲಿಟ್ಟಿದ್ದ 46 ಲಕ್ಷಗಳನ್ನು ಲಪಟಾಯಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಸಿಂಧನೂರು ಪೊಲೀಸರು 48 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವಾಹನದ ಚಾಲಕ ಮತ್ತು ಆತನ ಸಹೋದರ ಸ್ನೇಹಿತನ ಜೊತೆ ಸೇರಿ ಈ ಕೃತ್ಯ ಎಸಗಿದ್ದು, ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಘಟನೆ ಬೆನ್ನತ್ತಿದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಾಹನದ ಚಾಲಕ ಸೈಯದ್  ಜುಬೇರ್ ಆತನ ಸಹೋದರ ಸೈಯದ್ ಖಲಂದರ್ , ಸ್ನೇಹಿತ ಗಣೇಶನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಿಂಧನೂರು ನಗರದ ಕನಕದಾಸ ವೃತ್ತದಲ್ಲಿ ಕಳೆದ 18ರ ರಾತ್ರಿ 8.30 ಕ್ಕೆ ಗಣೇಶ್ ಬೀಡಿ ಕಂಪನಿಯ ವಾಹನದ ಚಾಲಕ ಮತ್ತು ಸೇಲ್ಸ್ ಮ್ಯಾನ್ ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲಿ ಬೀಡಿ ಮಾರಾಟ ಮಾಡಿದ ಹಣವನ್ನು ವಾಹನದಲ್ಲಿಟ್ಟು ಊಟಕ್ಕೆ ಹೋಗಿದ್ದರು.

ಮರಳಿ ಬರುವಷ್ಟರಲ್ಲಿ ಹಣವನ್ನು ದುಷ್ಕರ್ಮಿಗಳು ಕಳುವು ಮಾಡಿ ಹೋಗಿದ್ದರು. ಪ್ರಕರಣದ ಬೇಧಿಸಲು ವಿಶೇಷ ತಂಡ ರಚಿಸಲಾಗಿತ್ತು.

Advertisement

ಇದನ್ನೂ ಓದಿ : ಕುಂದಾಪುರ: ಸೀಮಂತ ಕಾರ್ಯಕ್ರಮಕ್ಕಾಗಿ ಬಂದ ಪತ್ನಿಯನ್ನು ಕೊಲೆಗೈದು,ಆತ್ಮಹತ್ಯೆ ಮಾಡಿಕೊಂಡ ಪತಿ!

Advertisement

Udayavani is now on Telegram. Click here to join our channel and stay updated with the latest news.

Next