Advertisement

ಸಿಂದಗಿ: ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

12:16 PM Oct 20, 2021 | Vishnudas Patil |

ಸಿಂದಗಿ: ವ್ಯಕ್ತಿಯನ್ನು ಪೆಟ್ರೋಲ್ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮೃತನ ಕುಟುಂಬ ಸದಸ್ಯರು ಶವವನ್ನು ತಹಶೀಲ್ದಾರ್ ಕಚೇರಿ ಎದುರುಗೆ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

Advertisement

ರೇವಣಸಿದ್ದಪ್ಪ ಸಿದ್ರಾಮಪ್ಪ ಮಲಕಾಪುರ (45) ಮೃತ ಪಟ್ಟ ದುರ್ದೈವಿ. ರೇವಣಸಿದ್ದಪ್ಪ ಮೂಲತಃ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಮುನಿರಬಮ್ಮನಹಳ್ಳಿ ಗ್ರಾಮದ ವ್ಯಕ್ತಿ. ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕಳೆದ 6-7 ವರ್ಷಗಳಿಂದ ಹಾಲಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. ಅ.12 ರಂದು ಮುನಿರಬಮ್ಮನಹಳ್ಳಿ ಗ್ರಾಮದ ವ್ಯಕ್ತಗಳು ಕಲಕೇರಿ ಗ್ರಾಮಕ್ಕೆ ಬಂದು ಹೊಂಚು ಹಾಕಿ ರೇವಣಸಿದ್ದಪ್ಪ ಮಲಕಾಪುರನನ್ನು ಕೊಲೆ ಮಾಡಲು ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಆದರೆ ಅವರ ಪ್ರಯತ್ನ ಫಲಕಾರಿಯಾಗದೇ ರೇವಣಸಿದ್ದಪ್ಪ ಬದುಕಿ ಉಳಿದಿದ್ದರು. ಸಾವು. ಬದುಕಿನೊಡನೆ ಹೋರಾಡಿ ಮೀರಜ್, ಬೆಂಗಳೂರು, ವಿಜಯಪುರ ಹೀಗೆ ಅನೆಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿ ಆಗದೇ ಅ.18 ಮುಂಜಾನೆ ಮರಣ ಹೊಂದಿದ್ದರು.

ಕೊಲೆ ಮಾಡಲು ಯತ್ನಿಸಿದ ಆರೋಪಿಗಳಿಗೆ ಶಿಕ್ಷೆ ಆಗುವುದಿಲ್ಲ ಎಂದು ಆರೋಪಿಸಿ ರೇವಣಸಿದ್ದಪ್ಪಅವರ ಪತ್ನಿ, ಸಹೋದರ, ಸಹೋದರಿ ಸೇರಿದಂತೆ ಕುಟುಂಬಸ್ಥರು ಶವವನ್ನು ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಖ್ಯದ್ವಾರದಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಆರೋಪಿಗಳನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಎಂದು ಮೃತ
ರೇವಣಸಿದ್ದಪ್ಪ ಸಹೋದರ ಶಿವರುದ್ರಪ್ಪ ಸಿದ್ರಾಮಪ್ಪ ಮಲಕಾಪುರ ಆಗ್ರ ಸಿದ್ದಾರೆ.

ಈ ಕುರಿತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೃತ್ಯಕ್ಕೆ ಮುಖ್ಯ ಕಾರಣನಾದ ಆರೋಪಿ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಮುನಿರಬಮ್ಮನಹಳ್ಳಿ ಗ್ರಾಮದ ಮಹಾಂತಗೌಡನ್ನು ಬಂದಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next