Advertisement

ಹಾನಿಗೊಳಗಾದ ಬೆಳೆ ಸಮೀಕೆ ವರದಿ ಸಲ್ಲಿಸಲು ಸೂಚನೆ

06:25 PM May 16, 2020 | Naveen |

ಸಿಂದಗಿ: ತಾಲೂಕಿನಲ್ಲಿ ಇತ್ತೀಚೆಗೆ ಮಳೆ-ಗಾಳಿಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ವರದಿಯನ್ನು ಪಡೆಯಲು ಶಾಸಕ ಎಂ.ಸಿ. ಮನಗೂಳಿ ಬೆಳೆ ಹಾನಿಗೊಳಗಾದ ರೈತರೊಂದಿಗೆ ಚರ್ಚಿಸಲು ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಕಚೇರಿಗೆ ಭೇಟಿ ನೀಡಿದರು.

Advertisement

ಈ ಸಂದರ್ಭದಲ್ಲಿ ಹಾನಿಗೊಳಗಾದ ತೋಟಗಾರಿಕೆ ಬೆಳೆ ಸಮೀಕ್ಷೆಗೆಂದು ಕ್ಷೇತ್ರಗಳಿಗೆ ಅಧಿಕಾರಿಗಳು ಹೋದ ಕಾರಣ ಕಚೇರಿಯಲ್ಲಿ ಯಾವ ಅಧಿಕಾರಿಗಳು ಇರಲಿಲ್ಲ. ಕಚೇರಿಯಲ್ಲಿ ಒಬ್ಬರಾದರೂ ಅಧಿಕಾರಿಗಳು ಇದ್ದು ಉಳಿದವರು ಸಮೀಕ್ಷೆಗೆ ಹೋಗಬೇಕು ಎಂದು ಹೇಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಅವರನ್ನು ಕರೆಸಿಕೊಂಡರು. ಕ್ಷೇತ್ರದಲ್ಲಿ ಮಳೆ-ಗಾಳಿಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ವರದಿ ತಿಳಿಯಲು ಕಚೇರಿಗೆ ಬಂದಿದ್ದು, ಇಲ್ಲಿ ಯಾವ ಅಧಿಕಾರಿಗಳು ಇಲ್ಲ. ಕರೆ ಮಾಡಿದರೂ ಸಿಗುತ್ತಿಲ್ಲ. ಹೀಗಾದಲ್ಲಿ ಹಾನಿಗೊಳಗಾದ ರೈತರಿಗೆ ನಾನೇನು ಉತ್ತರ ನೀಡಲಿ ಎಂದು ಇಒ ಸುನೀಲ ಮದ್ದಿನ ಅವರಿಗೆ ಪ್ರಶ್ನಿಸಿದರು.

ಇಒ ಅವರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಗಿ ಹಿರೇಕುರಬರ ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿದರು. ಶಾಸಕ ಎಂ.ಸಿ. ಮನಗೂಳಿ ಮಾತನಾಡಿ, ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ತಾಲೂಕಿನಲ್ಲಿ ಆದ ಮಳೆ-ಗಾಳಿಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಹೀಗಾಗಿ ಶೀಘ್ರವೇ ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆ ಹಾನಿ ಸಮೀಕ್ಷೆ ಮಾಡಿ ಮಾಹಿತಿ ನೀಡಬೇಕು. ವಿಳಂಬ ಮಾಡಿದಲ್ಲಿ ಅಂಥ ಅಧ ಇಕಾರಿಗಳ ಶಿಸ್ತು ಕ್ರಮ ಕೈಕೊಳ್ಳುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್‌ ತಾಲೂಕು ವಕ್ತಾರ ಸಿದ್ದಣ್ಣ ಚೌಧರಿ, ಎಸ್‌ಸಿ ಎಸ್‌ಟಿ ಘಟಕ ತಾಲೂಕು ಅಧ್ಯಕ್ಷ ಪರಶುರಾಮ ಕಾಂಬಳೆ, ಹುಯೋಗಿ ತಳ್ಳೋಳ್ಳಿ ಹಾಗೂ ಹಾನಿಗೊಳಗಾದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next