Advertisement

ಸ್ಲಮ್‌ಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

12:24 PM Jun 05, 2020 | Suhan S |

ಅಥಣಿ: ಸ್ಲಮ್‌ ಬೋರ್ಡ್‌ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ಸಂತೋಷ ತಂದಿದೆ. ಸ್ಲಮ್‌ಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

Advertisement

ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಥಣಿಗೆ ಆಗಮಿಸಿದ ಅವರನ್ನು ಅಭಿಮಾನಿಗಳು ಪ್ರವಾಸಿಮಂದಿರದಲ್ಲಿ ಭವ್ಯವಾಗಿ ಸ್ವಾಗತಿಸಿದರು. ಇದೆ ವೇಳೆ ಮಾತನಾಡಿದ ಕುಮಠಳ್ಳಿ, ಈ ಸ್ಥಾನಮಾನವನ್ನು ಕನಸು ಮನಸಿನಲ್ಲಿಯೂ ಊಹೆ ಮಾಡಿರಲಿಲ್ಲ. ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ಕೊಟ್ಟಿದ್ದಕ್ಕೆ ರಾಜ್ಯ ನಾಯಕರಿಗೆ ಮತ್ತೂಮ್ಮೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಪೂರ್ಣ ಅವಧಿ ಪೂರೈಸುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಸಚಿವ ಸ್ಥಾನಕ್ಕಿಂತಲೂ ಮಂಡಳಿ ಸ್ಥಾನ ತೃಪ್ತಿ ತಂದಿದೆ. ಕಸದಿಂದ ರಸ ತೆಗೆದು ತೋರಿಸುತ್ತೇನೆ. ಕರ್ನಾಟಕ ರಾಜ್ಯದ ತುಂಬೆಲ್ಲಾ ಕೆಲಸ ಮಾಡುತ್ತೇನೆ. ಹಲವಾರು ಯೋಜನೆಗಳನ್ನು ರೂಪಿಸುತ್ತೇವೆ. ಅಧಿಕಾರಿಗಳ ಜೊತೆ ಬುಧವಾರ ಒಂದು ಹಂತದ ಸಭೆ ನಡೆಸಿದ್ದೇನೆ. ಡಿಸಿಎಂ ಲಕ್ಷ್ಮಣ್‌ ಸವದಿ ಅವರಿಗೆ ನನಗೆ ಯಾವುದೇ ವೈಮನಸ್ಸು ಇಲ್ಲ. ಅಥಣಿ ಭಾಗಕ್ಕೆ ಜಲಸಂಪನ್ಮೂಲ ಸಚಿವರು ಹಲವಾರು ಯೋಜನೆ ನೀಡಿದ್ದಾರೆ. ಇದುವರೆಗೂ ಅಥಣಿ ತಾಲೂಕಿಗೆ 1200 ಕೊಟಿ ರೂ. ನೀಡಿದ್ದಾರೆ. ಮುಂದೆ ಕೂಡ ಅಥಣಿ ಭಾಗಕ್ಕೆ ವಿಶೇಷ ಯೋಜನೆಗಳನ್ನು ನೀಡುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಶೈಲ ನಾಯಿಕ, ಜಿ.ಪಂ ಸದಸ್ಯ ಗುರಪ್ಪ ದಾಸ್ಯಾಳ, ಮುಖಂಡರಾದ ಶಿವಾನಂದ ದಿವಾನಮಳ, ಮಲ್ಲಿಕಾರ್ಜುನ ಅಂದಾಣಿ, ಅಮೂಲ ನಾಯಿಕ, ನಿಂಗಪ್ಪ ನಂದೇಶ್ವರ, ಪ್ರಕಾಶ ಚನ್ನಣ್ಣವರ, ಅಲಗೊಂಡ ಪಾಟೀಲ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next