Advertisement

ಸರಳವಾಗಿ ಶ್ರೀರಾಮ ನವಮಿ ಆಚರಣೆ

11:23 AM Apr 03, 2020 | Sriram |

ಉಡುಪಿ/ಮಂಗಳೂರು: ಶ್ರೀರಾಮ ನವಮಿ ಮಹೋತ್ಸವವನ್ನು ಕೋವಿಡ್‌- 19 ಭೀತಿ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಗುರುವಾರ ಸರಳವಾಗಿ ಆಚರಿಸಲಾಯಿತು.

Advertisement

ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತಿದ್ದ ಹಬ್ಬ ಈ ಬಾರಿ ಮನೆಗಳಿಗೆ ಸೀಮಿತವಾಯಿತು. ಮನೆಗಳಲ್ಲಿ ರಾಮಾಯಣ ಪಠಣ, ರಾಮ ಮಂತ್ರೋಚ್ಚಾರ ನಡೆಸಲಾಯಿತು.ಉಡುಪಿ ಮಠದಲ್ಲಿ ಶ್ರೀಕೃಷ್ಣನಿಗೆ ಪರ್ಯಾಯ ಅದಮಾರು ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಪಟ್ಟಾಭಿ ರಾಮ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಭಾಗವತ ಸಪ್ತಾಹ
ಪರ್ಯಾಯ ಅದಮಾರು ಶ್ರೀಕೃಷ್ಣ ಮಠದಲ್ಲಿ ರಾಮನವಮಿ ಶುಭದಿನವಾದ ಗುರುವಾರದಿಂದ ಎ. 8ರ ಹನುಮಜ್ಜಯಂತಿ ವರೆಗೆ ಪ್ರತಿನಿತ್ಯ ಭಾಗವತ ಸಪ್ತಾಹಕ್ಕೆ ಪರ್ಯಾಯ ಅದಮಾರು ಶ್ರೀ ಈಶಪ್ರಿಯತಿರ್ಥ ಶ್ರೀಪಾದರು ಸಂಕಲ್ಪಿಸಿದ್ದಾರೆ. ಪ್ರತಿದಿನ ಬೆಳಗ್ಗೆ 9ರಿಂದ 11ರ ವರೆಗೆ ಮಠದೊಳಗೆ ಪಾರಾಯಣ ನಡೆಯಲಿದೆ.

ಗುರುವಾರ ಸಂಜೆ 5ರಿಂದ 6ರ ವರೆಗೆ ರಾಮತಾರಕ ಮಂತ್ರ ಮತ್ತು ಧನ್ವಂತರಿ ಮಂತ್ರ ಪಠಣ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next