Advertisement
ಕಳೆದ ವಾರ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ದೂರದ ಇಟಲಿಯಲ್ಲಿ ಸಪ್ತಪದಿ ತುಳಿದರು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ “ವಿರುಷ್ಕಾ’ ಮದುವೆ ಎಂದರೆ ಕೇಳಬೇಕೆ? ಜೋಡಿಯ ಪ್ರತಿ ನಡೆಯನ್ನೂ, ಉಡುಗೆ- ತೊಡುಗೆ, ಆಭರಣವನ್ನೂ ಜನ ಕುತೂಹಲದಿಂದ ಗಮನಿಸಿದರು. ಈಗಾಗಲೇ ಮದುವೆಯ ಫೋಟೊಗಳು ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮದುವಣಗಿತ್ತಿ ಅನುಷ್ಕಾಳ ಅಲಂಕಾರವನ್ನು ಎಲ್ಲರೂ ಹೊಗಳುವವರೇ.
Related Articles
ಅನುಷ್ಕಾ ಹೀಗೆ ನ್ಯೂಡ್ ಲಿಪ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಮ್ಯಾಗಝಿನ್ ಕವರ್ ಪೇಜ್‌ಗಳಲ್ಲಿಯೂ ಅನುಷ್ಕಾ ಲಿಪ್‌ಸ್ಟಿಕ್ ಇಲ್ಲದೇ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮ್ಯಾಗಝಿನ್‌ಗಳ ಫೋಟೊಗಳಲ್ಲಿ ಹೈಲೈಟ್ ಆಗೋದೇ ಲಿಪ್‌ಸ್ಟಿಕ್. ಹಾಗಾಗಿ ನಟಿಯರು, ರೂಪದರ್ಶಿಯರು ಗಾಢ ಲಿಪ್‌ಸ್ಟಿಕ್‌ಗಳನ್ನೇ ಬಳಸುತ್ತಾರೆ. ಆದರೆ 2013, 2015 ಮತ್ತು 2017ರ ಫೆಮಿನಾ ಮ್ಯಾಗಝಿನ್‌ಗಳ ಕವರ್ ಪೇಜ್‌ಗಳಲ್ಲಿ ಅನುಷ್ಕಾ ನ್ಯೂಡ್ ಲಿಪ್ಸ್‌ನಲ್ಲಿ ಪೋಸ್ ನೀಡಿದ್ದಾರೆ.
Advertisement
ನೋ ಮೇಕಪ್ ಲುಕ್ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಆಕೆಯ ಮೇಕಪ್ ಮಾತ್ರ ತುಂಬಾ ಸಿಂಪಲ್. ಸಹಜ, ಸರಳ ಸುಂದರಿ ಎಂದೇ ಗುರುತಿಸಲ್ಪಡುವ ಅನುಷ್ಕಾ, “ನೋ ಮೇಕಪ್ ಲುಕ್’ನಲ್ಲೇ ಭಾರೀ ಫೇಮಸ್. ಹಾಲ್ಗೆನ್ನೆಯ, ನುಣುಪಾದ ಚರ್ಮದ ಈ ಬೆಡಗಿ, ಕೇವಲ ಬೋಲ್ಡ್ ಐ ಲೈನರ್, ಮಸ್ಕರದಲ್ಲೂ ಸುಂದರವಾಗಿ ಕಾಣುತ್ತಾರೆ. ಕೆಲವೊಮ್ಮೆ ತುಟಿಗೆ ಬಣ್ಣ ಹಚ್ಚಿದ್ದಾರೋ, ಇಲ್ಲವೋ ಅಂತ ಗೊತ್ತಾಗದಷ್ಟು ತೆಳುವಾಗಿ ಲಿಪ್‌ಸ್ಟಿಕ್ ಬಳಸುವ ಅನುಷ್ಕಾ, ಲಿಪ್‌ಸ್ಟಿಕ್ ಬಣ್ಣಗಳ ಆಯ್ಕೆಯಲ್ಲೂ ಬಲುಜಾಣೆ. ತೆಳುವಾಗಿ ಹಚ್ಚಿದ ಫೌಂಡೇಶನ್, ಗಾಢವಾದ ಮಸ್ಕರ ಹಾಗೂ ತೆಳು ಲಿಪ್‌ಸ್ಟಿಕ್ ಇದು ಅನುಷ್ಕಾಳ ಮೇಕಪ್ ಮಂತ್ರ. ನ್ಯೂಡ್ ಲಿಪ್ಸ್‌ಗಾಗಿ ಏನು ಮಾಡ್ಬೇಕು?
1. ಮೃದುವಾದ ಬ್ರಶ್‌ನಿಂದ ತುಟಿಯ ಒಣಗಿದ ಚರ್ಮವನ್ನು ಆಗಾಗ ಉಜ್ಜಿ ತೆಗೆಯಿರಿ. ಇಲ್ಲದಿದ್ದರೆ ತುಟಿ ಒಣಗಿರುವುದು ಎದ್ದು ಕಾಣಿಸಿ, ಗಾಢ ಲಿಪ್‌ಸ್ಟಿಕ್ ಬಳಸುವುದು ಅನಿವಾರ್ಯವಾಗುತ್ತದೆ. 2. ನಿಮ್ಮ ಮುಖದ ಬಣ್ಣಕ್ಕೆ ಸರಿ ಹೊಂದುವಂಥ ಲಿಪ್‌ಸ್ಟಿಕ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. 3. ಲಿಪ್‌ಸ್ಟಿಕ್ ಬಳಸುವ ಮುನ್ನ ಲಿಪ್‌ಲೈನರ್‌ನಿಂದ ತುಟಿಯ ಸುತ್ತ ತೆಳುವಾಗಿ ಗೆರೆ ಎಳೆಯಿರಿ. 4. ಕಣ್ಣುಗಳು ಆಕರ್ಷಕವಾಗಿ ಕಾಣುವಂತೆ ಗಾಢವಾಗಿ ಮಸ್ಕರ, ಕಾಜಲ್ ಹಚ್ಚಿ. ಆಗ “ಬೋಲ್ಡ್ ಐಸ್, ನ್ಯೂಡ್ ಲಿಪ್ಸ್’ ಲುಕ್ ನಿಮ್ಮದಾಗುತ್ತದೆ.