Advertisement
ವೈರಸ್ ವಿರುದಟಛಿ ಸಮರ ಸಾರಿ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾ ರದ ಆದೇಶ, ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ಮನವಿಯಂತೆ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಹಬ್ಬದ ಪ್ರಾರ್ಥನೆ (ನಮಾಜ್) ಸಲ್ಲಿಸಿದರು. ನಮಾಜ್ ಸಲ್ಲಿಸುವ ಮತ್ತು ಪರಸ್ಪರ ಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ಸಾಮಾಜಿಕ ಅಂತರದ ನಿಯಮಗಳ ಪಾಲನೆ ಮಾಡಲಾಗಿತ್ತು. ಶುಚಿತ್ವ ಕಾಯ್ದುಕೊಳ್ಳಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಧಾರ್ಮಿಕ ಆಚರಣೆ ನಿರ್ಬಂಧಿಸಿದ ಪರಿಣಾಮ ಜನರು ಈದ್ಗಾ, ಮಸೀದಿ ಮತ್ತು ದರ್ಗಾಗಳಿಗೆ ತೆರಳದೆ ತಮ್ಮ ಕುಟುಂಬದ ಸದಸ್ಯರ ಜತೆ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.
Related Articles
Advertisement
15 ಸಾವಿರ ಬಿರಿಯಾನಿ: ಲಾಕ್‌ಡೌನ್ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಗೆ ತೆರಳಲು ಬಯಸಿ ಸರ್ಕಾರದ ಅನುಮತಿಗಾಗಿ ನಗರದ ಅರಮನೆ ಮೈದಾನದಲ್ಲಿ ಕಾದಿರುವ ಉತ್ತರ ಭಾರತದ ಸಾವಿರಾರು ವಲಸೆ ಕಾರ್ಮಿಕರಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡುತ್ತಿರುವ “ನಮ್ಮ ಗೆಳೆಯರ ತಂಡ’ ಹಬ್ಬದ ದಿನ ಈ ಕಾರ್ಮಿಕರು ಸಹ ಸಂಭ್ರಮ ಆಚರಿಸಬೇಕು ಎಂಬ ಉದ್ದೇಶದಿಂದ ಸೋಮವಾರ 15 ಸಾವಿರ ಚಿಕನ್ ಬಿರಿಯಾನಿ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು ಎಂದು ತಂಡದ ಫಹದ್ ಖಾಲಿದ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಕೋವಿಡ್-19 ಪರಿಣಾಮ ಸರ್ಕಾರದ ಆದೇಶ, ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ಮುಖಂ ಡರ ಮನವಿ ಯಂತೆ ಮುಸಲ್ಮಾನರು ಸರಳ ರೀತಿಯಲ್ಲಿ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ವೈರಸ್ ವೇಗವಾಗಿ ಹರಡು ತ್ತಿರುವುದರಿಂದ ಮುಂದಿನ ದಿನಗಳು ನಮ್ಮ ಪಾಲಿಗೆ ಸವಾಲಿನ ದಿನಗಳಾಗಿವೆ. ಕೊರೊನಾ ಮನುಷ್ಯ ಸಮಾಜಕ್ಕೆ ಅಂಟಿ ಕೊಂಡ ಸೋಂಕು. ಇದರ ವಿರುದಟಛಿ ಎಲ್ಲಾ ಜಾತಿ-ಧರ್ಮಗಳು ಒಂದಾಗಿ ಹೋರಾಡಬೇಕು.-ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಇಮಾಮ್-ಖತೀಬ್, ಸಿಟಿ ಜಾಮೀಯಾ ಮಸೀದಿ.