Advertisement
ಪ್ರತಿ ವರ್ಷ ವರ ನಟ ಡಾ. ರಾಜಕುಮಾರ್, ಪುನೀತ್ ರಾಜಕುಮಾರ್ ಅವರ ಹಾಡುಗಳನ್ನು ಹಾಕಿ ಸಂಭ್ರಮಿಸುತ್ತಿದ್ದವರು. ಈ ಬಾರಿಯೂ ಅವರದೇ ಅಭಿನಯದ ಹಾಡುಗಳನ್ನು ಹಾಕಿ ಸ್ಮರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಉದಯಭಾನು ಕಲಾಸಂಘ, ಕನ್ನಡಭವನ ಸೇರಿದಂತೆ ಹಲವೆಡೆ ಅದ್ಧೂರಿಯಾಗಿ ದೀಪದ ಅಲಂಕಾರ ಮಾಡಲಾಗಿತ್ತು. ಆಟೋ ನಿಲ್ದಾಣ, ಟ್ಯಾಕ್ಸಿ ನಿಲ್ದಾಣ, ಬಸ್‌ಗಳು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಧ್ವಜಾರೋಹಣ ಮಾಡಿ, ರಾಜ್ಯೋತ್ಸವವನ್ನು ಆಚರಿಸಲಾಯಿತು.
Related Articles
Advertisement
ಬೆಂಗಳೂರು ನಗರ ವಿವಿ
ಬೆಂ.ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕುಲಪತಿ ಡಾ. ಲಿಂಗರಾಜ ಗಾಂಧಿ ಅವರು ತಾಯಿ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಎನ್‌ಎಸ್‌ಎಸ್ ಸಂಯೋಜಕರಾದ ಗೋವಿಂದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕನ್ನಡ ಗೆಳೆಯರ ಬಳಗ
ಕನ್ನಡ ಗೆಳೆಯರ ಬಳಗವು ಕವಿ ಪ್ರತಿಮೆಗಳಿಗೆ ಮಾಲಾರ್ಪಣೆ ನಂತರ ಬಿಎಂಶ್ರೀ ಪ್ರತಿಮೆ ಎದುರು ನಡೆದ ಕನ್ನಡ ಚಿಂತನ ಸಭೆ, ಬಿಎಂಶ್ರೀ ಪ್ರತಿಮೆಯನ್ನು ನಿರ್ಮಿಸಿದ ಕೇಂದ್ರ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ವೆಂಕಟಾಚಲಪತಿ ಅವರಿಗೆ ಗೌರವಾರ್ಪಣೆ ಂಆಡಲಾಯಿತು. ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಇದ್ದರು. ಕಸಾಪದಿಂದ ರಾಜ್ಯೋತ್ಸವ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಕಸಾಪ ಆಡಳಿತಾಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರೂ ಆದ ಎಸ್. ರಂಗಪ್ಪ, ಪರಿಷತ್ತು ಮತ್ತು ಕನ್ನಡದ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ರಂಗಪ್ಪ, “ಕನ್ನಡ ಸಾಹಿತ್ಯ ಪರಿಷತ್ತು ಈ ನಾಡನ್ನು ಕಟ್ಟಿ ಬೆಳೆಸುವಲ್ಲಿ ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ಕೆಲಸ ಮಾಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಿಯಾಗಿ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಮಹನೀಯರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ಮೂಲಕ ಈ ನಾಡು, ಸಂಸ್ಕೃತಿಯನ್ನು ಬೆಳಗಿಸುವ ಕಾರ್ಯವಾಗುತ್ತಿದೆ. ಪುಸ್ತಕಗಳ ಪ್ರಕಟಣೆಯ ಮೂಲಕ, ಸಾಹಿತಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾತ್ಯ ಪರಿಷತ್ತು ಅಪಾರ ಕಾಣಿಕೆ ನೀಡಿದೆ ಎಂದರು.