Advertisement

ಶಿಡ್ಲಘಟ್ಟ: ಕೋವಿಡ್‌ನಿಂದ ಸರಳ ಸ್ವಾತಂತ್ರ್ಯ ದಿನ

05:01 PM Aug 16, 2021 | Team Udayavani |

ಶಿಡ್ಲಘಟ್ಟ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನವನ್ನುಕೋವಿಡ್‌ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.

Advertisement

ಶಾಸಕ ವಿ.ಮುನಿಯಪ್ಪ ಮತ್ತು ತಹಶೀಲ್ದಾರ್‌ಬಿ.ಎಸ್‌.ರಾಜೀವ್‌ಧ್ವಜಾರೋಹಣ ನೆರವೇರಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶೇ.100ಫಲಿತಾಂಶ ಪಡೆದ ಸರ್ಕಾರಿ ಹಾಗೂ ಅನುದಾನಿತಶಾಲೆಗಳ ಮುಖ್ಯ ಶಿಕ್ಷಕರು,ಕೋವಿಡ್‌ ಕೇರ್‌ ಸೆಂಟರ್‌ನ್ನಾಗಿ ಮಾಡಿದ್ದ ವಸತಿ ಶಾಲೆಗಳ ಮುಖ್ಯ ಶಿಕ್ಷಕರು,ಉತ್ತಮ ಸಾಧನೆ ಮಾಡಿದ5 ಸರ್ಕಾರಿ ಪೌಢಶಾಲೆಗಳಮುಖ್ಯ ಶಿಕ್ಷಕರು, ಹೆಚ್ಚು ಅಂಕ ಪಡೆದ5ಸರ್ಕಾರಿಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕೊರೊನಾ ವಾರಿಯರ್ಸ್‌, ಪಿಡಿಒ, ಕಂದಾಯಇಲಾಖೆ, ಸರ್ಕಾರಿ ಆಸ್ಪತ್ರೆ, ನಗರಸಭೆ, ಪೊಲೀಸ್‌ಇಲಾಖೆ,ನೀರುಗಂಟಿಗಳು,ಅಂಗನವಾಡಿಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯಹಬ್ಬಗಳಿಗೆಸದಾ ಸಹಕಾರ ನೀಡುತ್ತಿದ್ದ ಕ್ರೀಡಾ ಶಿಕ್ಷಕಅಗಜಾನನಮೂರ್ತಿಅವರನ್ನು ಗೌರವಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷಬಿ.ಸಿ.ನಂದೀಶ್‌, ನಗರಸಭೆ ಅಧ್ಯಕ್ಷೆ ಸಿ.ಎಂ.ಸುಮಿತ್ರಾರಮೇಶ್‌, ಉಪಾಧ್ಯಕ್ಷ ಅಫÕರ್‌ಪಾಷ, ತಾಪಂ ಇಒಚಂದ್ರಕಾಂತ್‌, ಆರಕ್ಷಕ ವೃತ್ತ ನಿರೀಕ್ಷಕ ಧರ್ಮೇಗೌಡ,ನಗರಸಭೆ ಪೌರಾಯುಕ್ತ ಶ್ರೀಕಾಂತ್‌, ಕೃಷಿಇಲಾಖೆಯ ಡಾ.ಮಂಜುನಾಥ್‌ ಉಪಸ್ಥಿತರಿದ್ದರು.

Advertisement

ವೃದ್ಧರಿಗೆ ಸನ್ಮಾನ: ತಾಲೂಕಿನ ಮಳ್ಳೂರಿನ ಸಮೀಪದಸಾಯಿನಾಥ ಜ್ಞಾನ ಮಂದಿರದಲ್ಲಿ 75ನೇ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ 75 ವರ್ಷ ಪೂರೈಸಿದರಾಮಬಸಪ್ಪ(96), ಬಿ.ವಿ.ರಾಜಲಕ್ಷಿ ¾à(85), ಕೆ.ಎಸ್‌.ಕೆಂಪಣ್ಣ(82),ರಾಜಗೋಪಾಲ(80), ಕೆ.ಎಸ್‌.ಮುನಿಯಪ್ಪ(80), ಮುನಿಲಕ್ಷ ¾ಮ್ಮ(80), ಮುನಿವೆಂಕಟಪ್ಪ(78), ಮುನಿರೆಡ್ಡಿ(78), ಸದಾನಂದ(75)ಅವರನ್ನು ಗೌರವಿಸಲಾಯಿತು.
ತರಕಾರಿಯಲ್ಲಿ ಭೂಪಟ ರಚನೆ: ತಾಲೂಕಿನಅಪ್ಪೇಗೌಡನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವಕಾರ್ಯಕ್ರಮಕ್ಕೆ ಆಗಮಿಸಿರುವ ಜಿ.ಕೆ.ವಿ.ಕೆ. ಕೃಷಿ ವಿದ್ಯಾರ್ಥಿಗಳು ಕ್ಯಾರೆಟ್‌, ಮೂಲಂಗಿ, ಬೆಂಡೇಕಾಯಿಬಳಸಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಭಾರತಭೂಪಟ ರಚಿಸಿ, ನೇಗಿಲಯೋಗಿ, ಕೃಷಿ ವಿಶ್ವವಿದ್ಯಾಲಯದ ಲಾಂಛನದ ರಂಗೋಲಿ Ãಚಿಸಿ, ‌ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ: ತಾಲೂಕಿನಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಆವರಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವಅಂಗವಾಗಿ ಧ್ವಜಾರೋಹಣ, ಆನ್‌ಲೈನ್‌ ಮೂಲಕವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ, ಪದಕ ಪ್ರದಾನಮಾಡಲಾಯಿತು. ಶಾಲಾ ಆವರಣದಲ್ಲಿ ಸ್ವಾತಂತ್ರ್ಯಅಮೃತ ಮಹೋತ್ಸವದ ನೆನಪಿಗಾಗಿ ಸಸಿನೆಡಲಾಯಿತು.

ಶ್ರಮಿಕರಿಗೆ ಸಿಹಿ ವಿತರಣೆ: ನಗರಸಭೆ ಅಧ್ಯಕ್ಷೆಸುಮಿತ್ರಾ ರಮೇಶ್‌ ಅವರು ನಗರಸಭೆಯಪೌರಕಾರ್ಮಿಕರಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವಅಂಗವಾಗಿ ಸಿಹಿ ವಿತರಿಸಲಾಯಿತು. ನಗರಸಭೆಯಪೌರಾಯುಕ್ತ ಶ್ರೀಕಾಂತ್‌, ನಗರಸಭಾ ಸದಸ್ಯರುಉಪಸ್ಥಿತರಿದ್ದರು.

ವ್ಯವಸ್ಥಾಪರಿಗೆ ಸನ್ಮಾನ: ತಾಲೂಕಿನ ಭಕರ್ತ ‌ಹಳ್ಳಿಯಲ್ಲಿಗ್ರಾಮಸ್ಥರಿಂದ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಬಿ.ಎಚ್‌.ನರಸಿಂಹಪ್ಪ ಅವರನ್ನು ಸನ್ಮಾನಿಸಲಾಯಿತು.ಅಂಚೆ ಚೀಟಿ ಪ್ರದರ್ಶನ: ತಾಲೂಕಿನ ಮೇಲೂರುಗ್ರಾಮದಲ್ಲಿ 75ನೇ ಸ್ವಾತಂತ್ರ ದಿನದ ಅಂಗವಾಗಿಗ್ರಾಮ ಪಂಚಾಯ್ತಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ,ಸಾತ Ì ಂತ್ರಕ್ಕಾಗಿ ಪ್ರಾಣ ಬಲಿದಾನ ಮಾಡಿದ ಅನೇಕಮಹನೀಯರ ಅಂಚೆ ಚೀಟಿ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆಬಳಿ ತೆಂಗಿನ ಸಸಿ ನೆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next