Advertisement

ಸಣ್ಣಗಾಗಲು ಸರಳ ಸೂತ್ರಗಳು

06:53 PM Oct 22, 2019 | Lakshmi GovindaRaju |

ದಿನದಿಂದ ದಿನಕ್ಕೆ ದಪ್ಪಗಾಗ್ತಾ ಇದ್ದೇನೆ. ಹೇಗಾದ್ರೂ ಮಾಡಿ ತೂಕ ಇಳಿಸಬೇಕು- ಇದು ಬಹಳಷ್ಟು ಜನರ ಕನವರಿಕೆ. ಅದರಲ್ಲೂ, ದೇಹದ ಆರೋಗ್ಯ, ಸೌಂದರ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುವ ಮಹಿಳೆಯರು, ದಪ್ಪ ಕಾಣಿಸಲು ಇಷ್ಟಪಡುವುದಿಲ್ಲ. ಯೋಗ, ಜಿಮ್‌, ಡಯಟ್‌ನಂಥ ಹತ್ತಾರು ವಿಧಾನಗಳಿಂದ ತೂಕ ಇಳಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ದಿನಾಲೂ ವಾಕ್‌ ಹೋಗ್ತಿದೀನಿ. ಸಿಹಿ ಕಡಿಮೆ ತಿಂತಾ ಇದೀನಿ. ಆದ್ರೂ, ತೂಕ ಕಡಿಮೆ ಆಗಿಲ್ಲ. ಹೇಗಾದ್ರೂ ಸರಿ, ಸ್ವಲ್ಪ ಸಣ್ಣ ಆಗ್ಲೆಬೇಕು ಅನ್ನುತ್ತಲೇ ಇರುತ್ತಾರೆ. ಅಂಥವರಿಗೆ, ಇಲ್ಲಿದೆ ಕೆಲವು ಟಿಪ್ಸ್‌.

Advertisement

-ಕಾಫಿ/ಟೀ ಕುಡಿಯುವ ಅಭ್ಯಾಸವಿದ್ದರೆ, ಅದರ ಬದಲು ಗ್ರೀನ್‌ ಟೀ ಕುಡಿಯಲು ಪ್ರಾರಂಭಿಸಿ.

-ಪ್ರತಿದಿನ ಬೆಳಗ್ಗೆ, ಬಿಸಿನೀರಿಗೆ ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯಿರಿ.

-ಕರಿದ ಪದಾರ್ಥಗಳು/ ಚಾಕೊಲೇಟ್‌/ ಐಸ್‌ಕ್ರೀಂ ತಿನ್ನಬೇಕೆಂದು ಮನಸ್ಸಾದಾಗ, ಹಣ್ಣು-ತರಕಾರಿ ತಿನ್ನಿ. ನಾರಿನ ಅಂಶವುಳ್ಳ ಈ ಪದಾರ್ಥಗಳಿಂದ ಬೇಗ ಹೊಟ್ಟೆ ತುಂಬುವುದಲ್ಲದೆ, ಜೀರ್ಣಶಕ್ತಿಗೂ ಒಳ್ಳೆಯದು.

-ಬೊಜ್ಜನ್ನು ಹೆಚ್ಚಿಸುವ ಅನ್ನ, ಸಕ್ಕರೆ ಮತ್ತು ಉಪ್ಪಿನ ಸೇವನೆಯಲ್ಲಿ ಹಿಡಿತವಿರಲಿ.

Advertisement

-ಈಗ ಸೇವಿಸುತ್ತಿರುವ ಆಹಾರದಲ್ಲಿ 1/3 ಅಷ್ಟನ್ನು ಮಾತ್ರ ಸೇವಿಸಿ. ಹಾಗಂತ, ಹೊಟ್ಟೆ ಖಾಲಿ ಇಡಬೇಕೆಂದಲ್ಲ. ಉಳಿದ ಭಾಗವನ್ನು, ಹಣ್ಣು-ತರಕಾರಿಗಳು ತುಂಬಿಕೊಳ್ಳಲಿ.

-ತೂಕ ಕಳೆದುಕೊಳ್ಳಬೇಕೆಂದು ಊಟ ಬಿಡಬೇಡಿ. ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ.

-ಅತಿ ಹೆಚ್ಚು ನೀರಿನ ಅಂಶ, ಕಡಿಮೆ ಕ್ಯಾಲೊರಿ ಇರುವ ಹಣ್ಣು-ತರಕಾರಿ (ಕಲ್ಲಂಗಡಿ, ಪಪ್ಪಾಯ, ಸೌತೆಕಾಯಿ) ಸೇವಿಸಿ.

-ಸಂಜೆ ಹೊತ್ತು ಸ್ನ್ಯಾಕ್ಸ್‌ನ ಬದಲು ಮೊಳಕೆ ಕಾಳುಗಳನ್ನು ಸೇವಿಸಿ.

-ಮೂರು ಹೊತ್ತಿಗಿಂತ ಜಾಸ್ತಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಬೆಳಗ್ಗೆ- ಮಧ್ಯಾಹ್ನ ಚೆನ್ನಾಗಿ ಊಟ ಮಾಡಿ ದರೂ, ರಾತ್ರಿಯ ಊಟ ಹಿತ- ಮಿತವಾಗಿರಲಿ.

-ಏನನ್ನಾದರೂ ತಿನ್ನಬೇಕು ಅಂತ ಚಪಲ ಆದಾಗೆಲ್ಲಾ, ಸಕ್ಕರೆ ಬೆರೆಸದೆ ಹಣ್ಣಿನ ರಸ ಅಥವಾ ಅರೆ ಬೆಚ್ಚಗಿನ ನೀರು ಕುಡಿಯಿರಿ. ಕ್ರಮೇಣ ಬಾಯಿ ಚಪಲ ನಿಯಂತ್ರಣಕ್ಕೆ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next