ಬೆಂಗಳೂರು: ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದ ಏರ್‌ಟೆಲ್‌ನ ಇಬ್ಬರು ಎಕ್ಸಿಕ್ಯೂಟಿವ್‌ಗಳನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ಚೇತನ್ (30) ಮತ್ತು ಯಲಹಂಕದ ಹರ್ಷ(29) ಬಂಧಿತರು. ಆರೋಪಿಗಳಿಂದ 6 ನಕಲಿ ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಜ.28ರಂದು ರಾಜೇಶ್ವರ್ ಎಂಬಾತ ನನ್ನು ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ರಾಜೇಶ್ವರ್ ರೇವಾ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಸೀಟ್ ಕೊಡಿಸುವುದಾಗಿ ವಂಚಿಸಿ 1.27 ಲಕ್ಷ ರೂ. ವಂಚಿಸಿದ್ದ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿತ್ತು. ಈತ ವಿಚಾರಣೆ ಸಂದರ್ಭದಲ್ಲಿ ಹೆಚ್ಚಿನ ಹಣ ಪಡೆದು ಚೇತನ್ ಮತ್ತು ಹರ್ಷ ನಕಲಿ ಸಿಮ್‌ಕಾರ್ಡ್ ಕೊಡುತ್ತಿದ್ದರು. ಅವುಗಳನ್ನು ಬಳಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದಾಗಿ ಹೇಳಿಕೆನೀಡಿದ್ದ. ಅಲ್ಲದೆ, ಈತ ದಯಾನಂದ ಸಾಗರ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ವಂಚಿಸಿದ್ದ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಿಂದ 120 ಗ್ರಾಂ ಚಿನ್ನಾಭರಣ, 7 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ನಕಲಿ ಸಿಮ್‌ಕಾರ್ಡ್‌ಗಳು!: ದೊಡ್ಡಬಳ್ಳಾಪುರದಲ್ಲಿ ಚೇತನ್ ಏರ್‌ಟೆಲ್ ಎಕ್ಸಿಕ್ಯೂಟಿವ್ ಆಗಿದ್ದು, ಈತನಿಗೆ ಹರ್ಷ ಸಹಾಯಕನಾಗಿದ್ದಾನೆ. ಇವರ ಬಳಿ ಸಿಮ್‌ಕಾರ್ಡ್‌ಗಳ ಖರೀದಿಗೆ ಬರುವ ಅಮಾಯಕರಿಗೆ ಒಂದು ಫಾರಂಗಿಂತ, ಹೆಚ್ಚಿನ ಫಾರಂಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದರು. ಜತೆಗೆ ಒದಕ್ಕಿಂತ ಹೆಚ್ಚಿನ ಫೋಟೋ ಹಾಗೂ ನಾಲ್ಕೈದು ಬಾರಿ ಬೆರಳ ಮುದ್ರೆಗಳನ್ನು ಪಡೆದುಕೊಳ್ಳುತ್ತಿದ್ದರು. ಒಂದು ಸಿಮ್ ಕಾರ್ಡ್ ಅನ್ನು ನಿರ್ದಿಷ್ಟಗ್ರಾಹಕನಿಗೆ ಕೊಟ್ಟರೆ, ಬಾಕಿ ಐದಾರು ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚಕರಿಗೆ ಕನಿಷ್ಠ 3-5 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು.