Advertisement

ರೇಷ್ಮೆ ವಹಿವಾಟು ಡೀಸಿ ವಿವೇಚನೆಗೆ ಬಿಟ್ಟದ್ದು

04:36 PM Apr 28, 2020 | mahesh |

ರಾಮನಗರ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಾಕಷ್ಟು ಮುಂಜಾಗ್ರತೆ  ಕ್ರಮ ಕೈಗೊಳ್ಳಲಾಗಿದೆ. ಆದರೂ ಮಾರುಕಟ್ಟೆಗಳವ್ಯಾಪಾರ ವಹಿವಾಟು ವಿಚಾರದಲ್ಲಿ ಆಯಾ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬಿಡಲಾಗಿದೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.

Advertisement

ತಾಲೂಕಿನ ಬಿಡದಿ ಹೋಬಳಿ ಉರಗಳ್ಳಿಯಲ್ಲಿರುವ ನಾಮಧಾರಿ ಸೀಡ್ಸ್‌ ಸಂಸ್ಥೆಗೆ ಭೇಟಿ ನೀಡಿದ್ದ ವೇಳೆ  ದ್ದಿಗಾರರೊಂದಿಗೆ ಮಾತನಾಡಿದರು. ಸೋಂಕು ಭೀತಿ ಹೆಚ್ಚಾದರೆ ಅಗತ್ಯ ನಿರ್ಧಾರ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ ಎಂದರು.  ಕೋವಿಡ್ ಈಗಲೆ ಮುಗಿಯುವ ವಿಚಾರವಲ್ಲ! ಕೋವಿಡ್ ಸೋಂಕು ಈಗಲೆ ಮುಗಿಯುವ ವಿಚಾರವಲ್ಲ, ಸಧ್ಯ ಯಾರೊಬ್ಬರು ಸೇಫ್ ಅಲ್ಲ, ಯಾರೂ ಎಚ್ಚರ ತಪ್ಪಬಾರದು ಎಂದರು. ಪಾದರಾಯನಪುರ ಗಲಭೆ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ ವಿಚಾರದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿ ಕ್ರಿಯಿಸಿದ ಅವರು ಸಧ್ಯ ಕೆಲವೊಮ್ಮೆ ಕೆಲವು ನಿರ್ಧಾರ ಗಳು ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ ಎಂದರು. ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಿಧಾನ
ಪರಿಷತ್‌ ಸದಸ್ಯ ಕೆ.ಟಿ. ಶ್ರೀ ಕಂಠೇಗೌಡರ ಮಗ ನಡೆಸಿದ ಹಲ್ಲೆಯನ್ನು ಖಂಡಿಸಿದ ಅವರು ಶ್ರೀಕಂಠೇಗೌಡರು ಶಿಕ್ಷ ಕರಾಗಿದ್ದವರು. ಆದರೆ ಅವರು ತಮ್ಮ ಮಗನಿಗೆ ಸರಿಯಾಗಿಪಾಠ ಹೇಳಿ ಕೊಟ್ಟಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next