Advertisement

ರೇಷ್ಮೆ ಕೃಷಿ ನಿರ್ಲಕ್ಷ್ಯ: ರಸ್ತೆ ತಡೆದು ನೂರಾರು ರೈತರ ಆಕ್ರೋಶ

05:38 AM May 17, 2020 | Lakshmi GovindaRaj |

ರಾಮನಗರ: ಶನಿವಾರ ರೀಲರ್‌ಗಳು ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂಬ ಮಾಹಿತಿ ಬಹುತೇಕ ರೈತರಿಗೆ ಇಲ್ಲದಿದ್ದ ರಿಂದಲೇ ರೇಷ್ಮೆ ಗೂಡನ್ನು ಹೊತ್ತು ತಂದಿದ್ದಾರೆ. ಇದಕ್ಕೆ ಮಾರುಕಟ್ಟೆಯ ಅಧಿಕಾರಿಗಳು, ಸ್ಥಳೀಯ ಆಡಳಿತ  ಮತ್ತು ಸರ್ಕಾರವೇ ಹೊಣೆ ಹೊರಬೇಕು ಎಂದು ರೇಷ್ಮೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಗೌತಂ ತಿಳಿಸಿದರು.

Advertisement

ರೇಷ್ಮೆ ಗೂಡು ಮಾರುಕಟ್ಟೆಯ ಮುಂಭಾಗ ಪ್ರತಿಭಟನೆ ವೇಳೆ ಅವರು ಪತ್ರಿಕೆಯೊಂದಿಗೆ ಮಾತನಾಡಿ ದರು. ರೀಲರ್‌  ಹರಾಜಿನಲ್ಲಿ ಭಾಗ ವಹಿಸುವುದಿಲ್ಲ ಎಂಬ ಮಾಹಿತಿ ಯನ್ನು ಮಾರುಕಟ್ಟೆಯ ಫ‌ಲಕದಲ್ಲಿ ಶುಕ್ರವಾರವೇ ಪ್ರಕಟಿಸಬಹುದಿತ್ತು. ಅದನ್ನು ಮಾಡಿಲ್ಲ ಎಂದು ಅವರು ಹರಿಹಾಯ್ದರು.

ರೇಷ್ಮೆ ಗೂಡಿಗೆ ಧಾರಣೆ ನಿರಂತರ ಕುಸಿಯುತ್ತಿದೆ. ಕೋವಿಡ್‌-19 ಲಾಕ್‌ ಡೌನ್‌  ಕಾರಣ ಎಲ್ಲ ರೈತರು ತಮ ಗಾಗುತ್ತಿರುವ ನಷ್ಟ ಸಹಿಕೊಂಡಿದ್ದರು. ಇನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹುತೇಕ ಎಲ್ಲ ಉದ್ಯಮಗಳ ಕಷ್ಟಗಳಿಗೂ ಸ್ಪಂದಿಸಿದೆ. ಆದರೆ ರೈತರ ಕೂಗಿಗೆ ಸ್ಪಂದಿಸಿಲ್ಲ. ವಿಶೇಷವಾಗಿ  ರೇಷ್ಮೆ ವಿಚಾರದಲ್ಲಿ ಸರ್ಕಾರಗಳು ನಿಲಿಪ್ತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಕೆಲವು ದಿನಗಳಲ್ಲಿ ಪ್ರತಿಭಟನೆಯ ಹಾದಿ ಹಿಡಿಯುವುದಾಗಿ ತಿಳಿಸಿದರು. ರೇಷ್ಮೆ ಬೆಳೆಗಾರರ ಸಂಘದ ಜಿ. ಮಹೇಂದ್ರ,  ಅಪ್ಪಾಜಿಗೌಡ ಮುಂತಾ ದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next