Advertisement

ಸಿಲಿಕಾನ್‌ ವ್ಯಾಲಿ ಟೆನಿಸ್‌: ಸಕ್ಕರಿ-ಬಝರ್ನೆಸ್ಕಾ ಫೈನಲ್‌

06:05 AM Aug 06, 2018 | Team Udayavani |

ಸ್ಯಾನ್‌ ಜೋಸ್‌ (ಕ್ಯಾಲಿಫೋರ್ನಿಯ): ವೀನಸ್‌ ವಿಲಿಯಮ್ಸ್‌ ಅವರನ್ನು ಮಣಿಸಿ ಅಚ್ಚರಿಯ ಫ‌ಲಿತಾಂಶ ದಾಖಲಿಸಿದ್ದ ಗ್ರೀಸ್‌ನ ಮರಿಯಾ ಸಕ್ಕರಿ ಈಗ “ಸಿಲಿಕಾನ್‌ ವ್ಯಾಲಿ ಕ್ಲಾಸಿಕ್‌’ ಟೆನಿಸ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಇವರ ಎದುರಾಳಿ ರೊಮೇನಿಯಾದ ಮಿಹೇಲಾ ಬಝರ್ನೆಸ್ಕಾ.

Advertisement

ಶನಿವಾರ ರಾತ್ರಿಯ ಸೆಮಿಫೈನಲ್‌ನಲ್ಲಿ ಅಮೆರಿಕದ ಡೇನಿಯಲ್‌ ಕೊಲಿನ್ಸ್‌ ವಿರುದ್ಧ ಇನ್ನೇನು ಸೋತೇ ಹೋಗುವ ಸ್ಥಿತಿಯಲ್ಲಿದ್ದ ಸಕ್ಕರಿ ಪವಾಡಸದೃಶ ರೀತಿಯಲ್ಲಿ ತಿರುಗಿ ಬಿದ್ದು ಗೆಲುವು ಒಲಿಸಿಕೊಂಡರು. ಮೊದಲ ಸೆಟ್‌ ಕಳೆದುಕೊಂಡು, ದ್ವಿತೀಯ ಸೆಟ್‌ನಲ್ಲಿ 1-4ರ ಹಿನ್ನಡೆಯಲ್ಲಿದ್ದ ಸಕ್ಕರಿ ಅಂತಿಮವಾಗಿ 3-6, 7-5, 6-2 ಅಂತರದಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ನೆಗೆದೇ ಬಿಟ್ಟರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಮಿಹೇಲಾ ಬಝರ್ನೆಸ್ಕಾ ಬೆಲ್ಜಿಯಂನ ಎಲಿಸ್‌ ಮೆರ್ಟೆನ್ಸ್‌ ಅವರಿಗೆ 4-6, 6-3, 6-1 ಅಂತರದ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next