Advertisement
ಇದೇ ಪತ್ರಿಕೆಯಲ್ಲಿ 2018ರ ನವೆಂಬರ್ ನಲ್ಲಿ ಪ್ರಕಟವಾದ ಇನ್ನೊಂದು ಸಂಶೋಧನಾ ವರದಿಯು ವಾಹನ ಸಂಚಾರದಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ, ಇಂಧನಗಳ ಬಳಕೆ, ನೈಸರ್ಗಿಕ ಉರುವಲುಗಳ ಬಳಕೆಯು ಅಸ್ತಮಾ ರೋಗಕ್ಕೆ ಪ್ರಮುಖ ಕಾರಣ ಎಂದಿದೆ.
Related Articles
Advertisement
ಹುಟ್ಟುವ ಮಕ್ಕಳ ಮೇಲೂ ಪರಿಣಾಮಹೆಚ್ಚುತ್ತಿರುವ ವಾಯುಮಾಲಿನ್ಯವು ಕಲುಷಿತ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗಷ್ಟೇ ಅಲ್ಲದೆ ಹುಟ್ಟುವ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ ಎಂದು ಡಾ. ಪರಮೇಶ್ ವಿವರಿಸುತ್ತಾರೆ. `ಮಗು ತಾಯಿಯ ಗರ್ಭದಲ್ಲಿದ್ದಾಗಲೂ ಭ್ರೂಣವು ಕಡಿಮೆ ಆಮ್ಲಜನಕ ಪಡೆಯುವುದರಿಂದ ತೊಂದರೆಗಳು ಉಂಟಾಗಬಹುದು. ಮಾಲಿನ್ಯಕಾರಕ ಗಾಳಿಯಿಂದಾಗಿ ಭ್ರೂಣಕ್ಕೆ ಪೋಷಣೆ ಮತ್ತು ಆಮ್ಲಜನಕವನ್ನು ಒದಗಿಸುವ ಹೊಕ್ಕುಳ ಬಳ್ಳಿಯು ತಾಯಿಯ ದೇಹದಲ್ಲಿನ ಆಮ್ಲಜನಕದ ಒತ್ತಡದಿಂದಾಗಿ ಹೆಪ್ಪುಗಟ್ಟುತ್ತದೆ’ ಎನ್ನುತ್ತಾರವರು. ಹೆಚ್ಚಿನ ವಾಯುಮಾಲಿನ್ಯಕ್ಕೆ ತುತ್ತಾದ ಗರ್ಭಿಣಿಯರಲ್ಲಿ 30 ಶೇಖಡಾ ಮಂದಿ ಅಕಾಲಿಕ ಹೆರಿಗೆಗೆ ಒಳಗಾಗುತ್ತಾರೆ ಮತ್ತು ಹುಟ್ಟಿದ ಮಕ್ಕಳು ನಿರಂತರ ಔಷಧಿ ಹಾಗೂ ಆರೋಗ್ಯದ ನಿಗಾದೊಂದಿಗೆ ಬೆಳೆಯುವಂತಾಗುತ್ತದೆ. ಮಾತ್ರವಲ್ಲದೇ ಈ ಮಕ್ಕಳಲ್ಲಿ ಉಬ್ಬಸದ ಪ್ರಮಾಣವೂ ಅಧಿಕವಾಗಿರುತ್ತದೆ ಎನ್ನುತ್ತಾರೆ ಡಾ. ಪರಮೇಶ್. `ಇತ್ತೀಚಿಗಿನ ವರ್ಷಗಳಲ್ಲಿ ಅಸ್ತಮಾ ಲಕ್ಷಣಗಳೊಂದಿಗೆ ನನ್ನ ಬಳಿಗೆ ಬರುವ ಮಕ್ಕಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ’ ಎನ್ನುವ ಅವರು `1975ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 9 ಶೇಖಡಾ ಮಕ್ಕಳಲ್ಲಿ ಅಸ್ತಮಾವಿದ್ದರೆ, 2016ರಲ್ಲಿ ಈ ಸಂಖ್ಯೆಯು ಬೆಂಗಳೂರಿನಲ್ಲಿ 26.5% ಕ್ಕೆ ಏರಿಕೆಯಾಗಿತ್ತು. ಮಾತ್ರವಲ್ಲದೇ 1975ರ ಅಪ್ರಾಪ್ತರ ಅಸ್ತಮಾ ಪ್ರಮಾಣದಲ್ಲಿನ ಶೇ. 20 ಮಂದಿ ತೀವ್ರ ತೆರೆನಾದ ಅಸ್ತಮಾದಲ್ಲಿದ್ದರೆ ಈಗ ಆ ಪ್ರಮಾಣವು 60 ರಿಂದ 70
ಶೇಖಡಕ್ಕೇರಿದೆ. ಸಂಶೋಧನಾ ವರದಿಗಳು ಇನ್ನಷ್ಟು ಆತಂಕಕಾರಿ ಮಾಹಿತಿಯನ್ನು ನೀಡುತ್ತವೆ. ಅವುಗಳಲ್ಲಿ ಒಂದರ ಪ್ರಕಾರ 2015ರಲ್ಲಿ ಬೆಂಗಳೂರು ನಗರದ ವೈದ್ಯರ ಬಳಿಗೆ ಬಂದ ಅಸ್ತಮಾ ರೋಗಿಗಳ ಸಂಖ್ಯೆ 2016ರಲ್ಲಿ ಶೇ.80ಕ್ಕಿಂತಲೂ ಹೆಚ್ಚಳವನ್ನು ಕಂಡಿದೆ. `ಪ್ರಾಕ್ಟೋ’ ಎಂಬ ರೋಗಿಗಳಿಗೆ ವೈದ್ಯರ ಭೇಟಿಯನ್ನು ನಿಗದಿಗೊಳಿಸುವ ಜಾಲತಾಣವೊಂದು 2017ರಲ್ಲಿ ತನ್ನಲ್ಲಿರುವ ಮಾಹಿತಿಯನ್ನು ಆಧರಿಸಿ, ಸಂಶೋಧನೆ ನಡೆಸುವ ಮೂಲಕ ಈ ಮಾಹಿತಿಯು
ಬೆಳಕಿಗೆ ಬಂದಿದೆ. ಇದರ ಜೊತೆಗೆ ಪ್ರಾಕ್ಟೋ ಬಿಡುಗಡೆ ಮಾಡಿದ `2ನೇ ವಾರ್ಷಿಕ ಆರೋಗ್ಯ ಮ್ಯಾಪ್’ ವರದಿಯ ಪ್ರಕಾರ ದೇಶದಲ್ಲೇ ವರ್ಷದಿಂದ ವರ್ಷಕ್ಕೆ ಅಸ್ತಮಾ ರೋಗಿಗಳ ಸಂಖ್ಯೆಯು ಬೆಂಗಳೂರು ನಗರದಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ದೇಶದ ಒಟ್ಟು ಏರಿಕೆಯಲ್ಲಿಯೇ ಬೆಂಗಳೂರಿನ (62%) ಪ್ರಮಾಣವು ಆತಂಕಕಾರಿಯಾಗಿ ಏರಿಕೆ ಕಂಡಿದ್ದು, ಉಳಿದಂತೆ ಮುಂಬಯಿ 64%, ದೆಹಲಿಯು 50% ಶೇಖಡಾ ಏರಿಕೆಯನ್ನು ದಾಖಲಿಸಿವೆ.