Advertisement

ಸಿಕ್ಕಿಂನಲ್ಲಿ ಮೊದಲ ಪ್ರಕರಣ: ದೇಶದಲ್ಲಿ 1.30 ಲಕ್ಷ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

01:36 PM May 24, 2020 | Mithun PG |

ನವದೆಹಲಿ: ದೇಶದಲ್ಲಿ ಕೋವಿಡ್ 19 ಆರ್ಭಟ ಆರಂಭವಾದಗಿನಿಂದ ಸಿಕ್ಕಿಂ ರಾಜ್ಯದಲ್ಲಿ ಒಂದೂ ಪ್ರಕರಣಗಳು ಕಂಡುಬಂದಿರಲಿಲ್ಲ. ಇದೀಗ ದೆಹಲಿಯಿಂದ ಮರಳಿದ ಓರ್ವ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ.

Advertisement

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ  6,654 ಹೊಸ ಪ್ರಕರಣಗಳು ಧೃಡಪಟ್ಟು ದಾಖಲೆ ಸೃಷ್ಟಿಯಾಗಿದೆ. ಆ ಮೂಲಕ ದೇಶದಲ್ಲಿ ಒಟ್ಟಾರೆಯಾಗಿ 1.30 ಲಕ್ಷ ಜನರು ವೈರಾಣು ಪೀಡಿತರಾಗಿದ್ದು, ಮೃತರ ಸಂಖ್ಯೆ 3,720ಕ್ಕೆ ಏರಿಕೆಯಾಗಿದೆ. ಕಳೆದ ಒಂದು ದಿನದಲ್ಲಿ 137 ಜನರು ಮೃತಪಟ್ಟಿದ್ದರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು 44,000 ಜನರು ವೈರಾಣುವಿನಿಂದ ಬಳಲುತ್ತಿದ್ದಾರೆ.  ನಂತರದಲ್ಲಿ ತಮಿಳುನಾಡುವಿನಲ್ಲಿ  15,512 ಜನರು ಸೋಂಕುವಿಗೆ ತುತ್ತಾದರೆ,  ಗುಜರಾತ್ ನಲ್ಲಿ 13,268, ಮತ್ತು ದೆಹಲಿಯಲ್ಲಿ 12,910 ವೈರಸ್ ನಿಂದ ಭಾಧಿತರಾಗಿದ್ದಾರೆ.

ಗಮನಾರ್ಹ ಸಂಗತಿಯೆಂದರೇ 1,15,364 ಜನರ ಗಂಟಲು ದ್ರವ ಮಾದರಿಗಳನ್ನು ಕಳೆದ 24 ಗಂಟೆಗಳಲ್ಲಿ  ಪರೀಕ್ಷಿಸಲಾಗಿದೆ.  ಈಗಾಗಲೇ ಸೋಂಕಿನಿಂದ 54,385 ಜನರು ಗುಣಮುಖರಾಗಿದ್ದಾರೆ.

ಮತ್ತೋಂದೆಡೆ ಅಮೆರಿಕಾದಲ್ಲಿ ಮರಣ ಮೃದಂಗ ಮುಂದುವರೆದಿದ್ದು, ಒಂದೇ ದಿನ 1,127 ಜನರು ಮೃತಪಟ್ಟಿದ್ದಾರೆ. ಈ ದೇಶದಲ್ಲಿ ಮೃತರ ಪ್ರಮಾಣ 97 ಸಾವಿರದ ಗಡಿ ದಾಟಿದ್ದು, ಸೋಂಕಿತರ ಸಂಖ್ಯೆ ಕೂಡ ಗಣನೀಯ ಏರಿಕೆ (16,21,658) ಕಂಡಿದೆ.

Advertisement

ಜಗತ್ತಿನಾದ್ಯಂತ ಕೋವಿಡ್ 19 ಮಹಾಮಾರಿಗೆ 3,43,823 ಜನರು ಬಲಿಯಾಗಿದ್ದು ಸೋಂಕಿತರ ಪ್ರಮಾಣ 54,02,198ಕ್ಕೆ ಏರಿಕೆಯಾಗಿದೆ. ವೈರಾಣುವಿಗೆ ತುತ್ತಾದವರಲ್ಲಿ ಸುಮಾರು 22,47,237 ಜನರು ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next