ಹೊಸದಿಲ್ಲಿ: ಭಾರತದ ಯಶಸ್ವಿ ಡಬಲ್ಸ್ ಆಟಗಾರ್ತಿಯರಾದ ಸಿಕ್ಕಿ ರಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಗಾಯದ ಸಮಸ್ಯೆಯಿಂದ ಉಬೇರ್ ಕಪ್ ಬ್ಯಾಡ್ಮಿಂಟನ್ ಕೂಟದಿಂದ ಹಿಂದೆ ಸರಿದಿದ್ದಾರೆ. “ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್’ ಶುಕ್ರವಾರ ಈ ವಿಷಯ ತಿಳಿಸಿದೆ.
ಸಿಕ್ಕಿ ರೆಡ್ಡಿ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಶುಕ್ರವಾರ ನಡೆದ ಎಂಆರ್‌ಐ ಸ್ಕ್ಯಾನ್‌ನಲ್ಲಿ ಈ ಸಮಸ್ಯೆ ದೃಢಪಟ್ಟಿದೆ. ಈ ಕಾರಣಕ್ಕಾಗಿ ನಾಲ್ಕರಿಂದ ಆರು ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅಸೋಸಿಯೇಶನ್ ಪ್ರಕಟನೆ ತಿಳಿಸಿದೆ.
ಇವರ ಜಾಗಕ್ಕೆ ಆಯ್ಕೆ ಟ್ರಯಲ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ರಿತಿಕಾ ಥಾಕ್ಕರ್ ಮತ್ತು ಸಿಮ್ರಾನ್ ಸಿಂಗ್ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ:ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಬೆಳ್ಳಿ ಗೆದ್ದ ಅನ್ಶು ಮಲಿಕ್, ರಾಧಿಕಾ
ಅಸೋಸಿಯೇಶನ್ ಗುರುವಾರವಷ್ಟೇ ಮುಂಬರುವ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಥಾಮಸ್, ಉಬೇರ್ ಕಪ್‌ಗೆ ಭಾರತೀಯ ತಂಡವನ್ನು ಪ್ರಕಟಿಸಿತ್ತು.
“ಇಂದಿರಾ ಗಾಂಧಿ ಕ್ರೀಡಾಂಗಣ’ದಲ್ಲಿ ನಡೆದ 6 ದಿನಗಳ ಆಯ್ಕೆ ಟ್ರಯಲ್ಸ್‌ನಲ್ಲಿ ಆಟಗಾರರು ತೋರ್ಪಡಿಸಿದ ನಿರ್ವಹಣೆಯ ಆಧಾರದಲ್ಲಿ ತಂಡವನ್ನು ಅಂತಿಮಗೊಳಿಸಲಾಗಿತ್ತು. ಉಬೇರ್ ಕಪ್ ಪಂದ್ಯಾವಳಿ ಮೇ 8ರಿಂದ 15ರ ವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿದೆ.