Advertisement
ಸೈಮಾದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 2023ನೇ ಸಾಲಿನಲ್ಲಿ ಕನ್ನಡದ ʼಕಾಂತಾರʼ, ತೆಲುಗಿನ ʼಆರ್ ಆರ್ ಆರ್ʼ ಹಾಗೂ ತಮಿಳಿನ ‘ಪೊನ್ನಿಯಿನ್ ಸೆಲ್ವನ್: ಭಾಗ 1’ ಸಿನಿಮಾಗಳು ನಾಮಿನೇಟ್ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.
Related Articles
Advertisement
ಕನ್ನಡ: 2022 ರಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮೋಡಿ ಮಾಡಿದ ಸಿನಿಮಾಗಳು ಬಂದಿದೆ. ಈ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿರುವುದರ ಜೊತೆಗೆ ಜನರ ಮನದಲ್ಲೂ ಸ್ಥಾನ ಪಡೆದುಕೊಂಡಿದೆ. ಸೈಮಾದಲ್ಲಿ ಪ್ರಮುಖವಾಗಿ ರಿಷಬ್ ಶೆಟ್ಟಿ ಅವರ ಸೂಪರ್ ಹಿಟ್ ‘ಕಾಂತಾರ’ ಯಶ್ ಅವರ ಬಾಕ್ಸ್ ಆಫೀಸ್ ಹಿಟ್ ‘ಕೆಜಿಎಫ್: ಚಾಪ್ಟರ್-2’ ಸಿನಿಮಾಗಳು 11 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಸಿನಿಮಾಗಳ ಸಾಲಿನಲ್ಲಿ ಬರುವ ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’, ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್‌ಟೇಲ್ 2’ ಮತ್ತು ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಅತ್ಯುತ್ತಮ ಚಿತ್ರಕ್ಕೆ ನಾಮನಿರ್ದೇಶನಗೊಂಡಿದೆ.
ಮಲಯಾಳಂ: ಕಳೆದ ವರ್ಷ ಮಾಲಿವುಡ್ ನಲ್ಲಿ ಗಮನ ಸೆಳೆದ ಅನೇಕ ಚಿತ್ರಗಳು ಬಂದಿದೆ. ಈ ಸಾಲಿನಲ್ಲಿ ಸೈಮಾ ಅವಾರ್ಡ್ಸ್ ಗಾಗಿ ನಾಮಿನೇಟ್ ಆಗಿರುವ ಪ್ರಮುಖ ಚಿತ್ರಗಳೆಂದರೆ, ಅಮಲ್ ನೀರದ್ ನಿರ್ದೇಶನದ ಮಮ್ಮುಟ್ಟಿ ಅವರ ʼಭೀಷ್ಮ ಪರ್ವಂʼ ಸಿನಿಮಾ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಇನ್ನು ಟೋವಿನೋ ಥಾಮಸ್ ಅಭಿನಯದ ‘ತಳ್ಳುಮಾಲ’ 7 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಪ್ರೇಕ್ಷಕರ ಮನಗೆದ್ದ ‘ಹೃದಯಂ’, ‘ಜಯ ಜಯ ಜಯ ಜಯ ಹೇ’, ‘ನ್ನ ತಾನ್ ಕೇಸ್ ಕೊಡು’ ʼಜನ ಗಣ ಮನ’ ಚಿತ್ರಗಳು ಬೆಸ್ಟ್ ಫಿಲ್ಮ್ಸ್‌ಗಾಗಿ ನಾಮಿನೇಟ್ ಆಗಿವೆ.
11ನೇ ವರ್ಷದ ಸೈಮಾಆವೃತ್ತಿಯ ಪ್ರಶಸ್ತಿ ಕಾರ್ಯಕ್ರಮ ಸೆಪ್ಟೆಂಬರ್ 15 ಮತ್ತು 16 ರಂದು ವರ್ಲ್ಡ್ ಟ್ರೇಡ್ ಸೆಂಟರ್ ದುಬೈನಲ್ಲಿ ನಡೆಯಲಿದೆ.