Advertisement

ಬಿಜೆಪಿ-ಎಐಎಡಿಎಂಕೆ ಮೈತ್ರಿ?

06:00 AM Apr 23, 2018 | Team Udayavani |

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಈಗಾಗಲೇ ಹಲವು ವಿಷಯಗಳಲ್ಲಿ ಬಿಜೆಪಿ ಪರ ನಿಲುವು ವಹಿಸಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಮತ್ತು ಎಐಎಡಿಎಂಕೆ ಸಂಬಂಧ ಎಂದಿಗೂ ಹಳಸುವುದಿಲ್ಲ ಎಂದು ಹೇಳಿಕೊಂಡಿದೆ. ಎಐಎಡಿಎಂಕೆ ಮುಖವಾಣಿ ನಮದು ಪುರಚಿ ತಲೈವಿ ಅಮ್ಮಾ ಎಂಬ ಪತ್ರಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದ್ದು, ಕಾವೇರಿ ವಿಷಯವಾಗಲೀ ಅಥವಾ ಇತರ ಯಾವುದೇ ವಿಷಯವಾದರೂ ಉಭಯ ಪಕ್ಷಗಳ ಸಂಬಂಧವನ್ನು ಕಳೆಗುಂದಿ ಸಲಾಗದು ಎಂದಿದೆ.

Advertisement

ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಈ ಸಂಬಂಧ ಎರಡೂ ಪಕ್ಷಗಳ ಹೈಕಮಾಂಡ್‌ ನಿರ್ಧರಿಸಬೇಕು. ಇದು ಸದ್ಯದ ಅಗತ್ಯ. ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಾಬ್ದಾರಿ ಯುತವಾಗಿ ಕೆಲಸ ಮಾಡುತ್ತಿವೆ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯತತ್ಪರವಾ ಗಿವೆ ಎಂದು ಇದರಲ್ಲಿ ವಿವರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next