Advertisement

ವೇತನ ತಾರತಮ್ಯ ಖಂಡಿಸಿ ಸಹಿ ಸಂಗ್ರಹ

01:31 AM Jun 18, 2019 | Team Udayavani |

ಬೆಂಗಳೂರು: ಸಾರಿಗೆ ನೌಕರರಿಗೆ ಆಗಿರುವ 6ನೇ ವೇತನ ಆಯೋಗದಲ್ಲಿನ ತಾರತಮ್ಯ ನಿವಾರಣೆ ಮಾಡುವಂತೆ ಒತ್ತಾಯಿಸಿ ಸೋಮವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷಿ ಪ್ರತಿಷ್ಠಾನವು ಸುಮಾರು ಎರಡು ಸಾವಿರಕ್ಕೂ ಅಧಿಕ ರಸ್ತೆ ಸಾರಿಗೆ ನೌಕರರಿಂದ ಸಹಿ ಸಂಗ್ರಹಿಸಿತು.

Advertisement

ಪುರಭವನದ ಎದುರು ಸಂಜೆ ಸಮಾವೇಶಗೊಂಡ ಸಾವಿರಾರು ನೌಕರರು, ವೇತನ ತಾರತಮ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಈ ಸಂಬಂಧ ಸರ್ಕಾರಕ್ಕೆ ಬರೆದ ಮನವಿ ಪತ್ರದಲ್ಲಿ ಸಹಿ ಹಾಕಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದಕ್ಕೂ ಮುನ್ನ ಬೃಹತ್‌ ಸಹಿ ಸಂಗ್ರಹ ಆಂದೋಲನಕ್ಕೆ ಸಾಹಿತಿಗಳಾದ ಪ್ರೊ. ಹಂಪ ನಾಗರಾಜಯ್ಯ ಮತ್ತು ಕಮಲಾ ಹಂಪನಾ ಚಾಲನೆ ನೀಡಿದರು.

ನಂತರ ಮಾತನಾಡಿದ ಪ್ರೊ. ಹಂಪ ನಾಗರಾಜಯ್ಯ, ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ. ಸಾರಿಗೆ ನಿಗಮಗಳು ಕೂಡ ಸರ್ಕಾರದ ಅಂಗ ಸಂಸ್ಥೆಗಳು. ಅಲ್ಲಿನ ನೌಕರರು ಇತರೆ ಇಲಾಖೆಗಳ ನೌಕರರಿಗಿಂತ ಹೆಚ್ಚು ಕಷ್ಟಪಟ್ಟು ಜನರ ಸೇವೆ ಮಾಡುತ್ತಾರೆ. ಆದ್ದರಿಂದ ಅವರಿಗೂ ಉಳಿದವರಿಗೆ ಸಿಗುವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಸ್ಥೆ ಪದಾಧಿಕಾರಿ ಚಂದ್ರು ಮಾತನಾಡಿ, ಸರ್ಕಾರದ ಇತರೆ ಇಲಾಖೆಗಳ ನೌಕರರಿಗೆ ನೀಡುವ ಪಿಂಚಣಿ, ಆರೋಗ್ಯ ಭಾಗ್ಯ ಸೇರಿದಂತೆ ಎಲ್ಲ ಸವಲತ್ತುಗಳನ್ನು ತಮಗೂ ಕಲ್ಪಿಸಬೇಕು. ಆ ಮೂಲಕ ನಮ್ಮ ನೆರವಿಗೆ ಧಾವಿಸಬೇಕು. ಮಂಗಳವಾರ ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲೂ ಈ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next