Advertisement

ಸಿಗಂದೂರು ಅರಣ್ಯ ಒತ್ತುವರಿ ಜಾಗ ತೆರವು

01:14 PM Apr 02, 2021 | Team Udayavani |

ಶಿವಮೊಗ್ಗ/ ಸಾಗರ: ಶ್ರೀ ಕ್ಷೇತ್ರ ಸಿಗಂದೂರುಚೌಡೇಶ್ವರಿ ದೇಗುಲದ ಅರಣ್ಯ ಭೂಮಿ ಒತ್ತುವರಿಗೆಸಂಬಂ ಧಿಸಿದಂತೆ ರಾಜ್ಯ ಹೈಕೋರ್ಟ್‌ ನೀಡಿದ್ದಆದೇಶದಂತೆ ದೇವಾಲಯದ ಹೊರವಲಯದಭೂಮಿಯನ್ನು ಸರಕಾರ ತೆರವುಗೊಳಿಸಿದೆ.ಗುರುವಾರ ಸಾಗರ ತಹಶೀಲ್ದಾರ್‌ ಚಂದ್ರಶೇಖರ್‌ನಾಯ್ಕ ನೇತೃತ್ವದ ಕಂದಾಯ ಇಲಾಖೆ ತಂಡಹೈಕೋರ್ಟ್‌ ಆದೇಶದಂತೆ ದೇವಸ್ಥಾನದಸ್ವತ್ತುಗಳಿರುವ 6 ಎಕರೆ 16 ಗುಂಟೆ ಜಾಗವನ್ನುಹೊರತುಪಡಿಸಿ ಉಳಿದ ಜಾಗಕ್ಕೆ ಬೇಲಿ ಹಾಕಿದೆ.

Advertisement

ಸಿಗಂದೂರು ದೇವಾಲಯದಲ್ಲಿ ಅರಣ್ಯ ಭೂಮಿಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಬೇಕೆಂದುತುಮರಿಯರೇ ಆದ ಲಕ್ಷಿ¾ನಾರಾಯಣ, ಶಿವರಾಜ್‌ಹಾಗೂ ಗೋವರ್ಧನ ಎನ್ನುವವರು ಹೈಕೋಟ್‌ìನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯಪೀಠ ದೇವಸ್ಥಾನದ ಕಟ್ಟಡಗಳಿರುವ ಜಾಗವನ್ನುಹೊರತುಪಡಿಸಿ ಉಳಿದ ಜಾಗವನ್ನು ಸರಕಾರದ ವಶಕ್ಕೆಪಡೆಯಬೇಕೆಂಬ ಆದೇಶ ನೀಡಿತ್ತು.

ಈ ಆದೇಶದನ್ವಯ ಈ ಹಿಂದೆಯೇ ಸರ್ವೇಮಾಡಿದಂತೆ ದೇಗುಲದ ಎಲ್ಲಾ ಮೂಲಸೌಕರ್ಯಗಳನ್ನು ಹಾಗೆಯೇ ಬಿಟ್ಟು ಹೆಚ್ಚುವರಿಯಾಗಿಇದ್ದ ಭೂಮಿಯನ್ನು ಗುರುತಿಸಿ ಬೇಲಿ ಹಾಕಿಸಲಾಗಿದೆ.ದೇವಸ್ಥಾನದ ಐದು ಕಟ್ಟಡಗಳೂ ತೆರವುಗೊಳಿಸಬೇಕಾದ ಜಾಗದಲ್ಲಿ ಬರಲಿದ್ದು, ಎಲ್ಲವನ್ನೂಗುರುತಿಸಲಾಗಿದೆ. ಇದರಲ್ಲಿ ದೇವಾಲಯದ ಸಿಬ್ಬಂದಿವಸತಿ ಗೃಹಗಳು, ಹೊಟೇಲ್‌ ಕಟ್ಟಡಗಳು ಸೇರಿವೆ.ದೇವಸ್ಥಾನದ ಅರ್ಚಕರು ದೇಗುಲದ ಮುಂಭಾಗಅಂಗಡಿ, ಹೊಟೇಲ್‌ಗ‌ಳನ್ನು ತೆರವು ಮಾಡಿ ಬೃಹತ್‌ಕಾಂಪೌಂಡ್‌ ಹಾಕಿದ್ದರಿಂದಲೇ ಮೊದಲು ವಿವಾದದಕಿಡಿ ಹೊತ್ತಿತ್ತು.

ಈಗ ನ್ಯಾಯಲಯದ ಆದೇಶದಂತೆಅರ್ಚಕರ ಮನೆ, ಕೊಟ್ಟಿಗೆ ಸೇರಿದಂತೆ 28 ಗುಂಟೆಪ್ರದೇಶವೂ ಸರಕಾರ ತೆರವು ಮಾಡಲಿರುವಪ್ರದೇಶದಲ್ಲಿಯೇ ಬರಲಿದೆ.ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಸ್ಥಳದಲ್ಲಿದ್ದು, ನ್ಯಾಯಾಲಯದ ಆದೇಶ ಜಾರಿಗೆಸ್ವಯಂಪ್ರೇರಣೆಯಿಂದ ಸಹಕರಿಸಿದ್ದಾರೆ.ದೇವಸ್ಥಾನದ ಅರ್ಚಕರು ಮತ್ತು ಆಡಳಿತ ಮಂಡಳಿನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿಮಧ್ಯಪ್ರವೇಶ ಮಾಡಿದ್ದ ಸರಕಾರ ದೇವಸ್ಥಾನಕ್ಕೆಸಲಹಾ ಸಮಿತಿ ರಚನೆ ಮಾಡಿತ್ತು. ಸಮಿತಿ ನೇಮಕಪ್ರಶ್ನಿಸಿ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್‌ನ್ಯಾಯಾಯಲದ ಮೆಟ್ಟಿಲೇರಿತ್ತು.

ಆ ಪ್ರಕರಣಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.ಈ ನಡುವೆ ತುಮರಿ ಭಾಗದ ಮೂವರು ವ್ಯಕ್ತಿಗಳುಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿಸ್ಮರಿಸಬಹುದು.ಧಾರ್ಮಿಕ ಕಾರ್ಯಗಳು ಅಬಾ ಧಿತ:ಸಿಗಂದೂರು ದೇವಾಲಯದಲ್ಲಿ ಕೋವಿಡ್‌ನಿಯಮಗಳಿಗೊಳಪಟ್ಟು ಧಾರ್ಮಿಕ ವಿ ಧಿ-ವಿಧಾನಗಳು ನಿತ್ಯವೂ ನಡೆಯುತ್ತಿದ್ದು, ಭಕ್ತರಿಗೆಯಾವುದೇ ಅಡಚಣೆ ಇಲ್ಲ.

Advertisement

ದೇವಾಲಯದಕಟ್ಟಡಗಳು, ವಸತಿಗೃಹ, ಸ್ನಾನಗೃಹ ಹಾಗೂಭೋಜನಾಲಯಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದೇಗುಲದ ಸ್ವತ್ತುಗಳಿರುವಜಾಗವನ್ನು ಹೊರತುಪಡಿಸಿ ಉಳಿದ ಜಾಗಕ್ಕೆ ಮಾತ್ರಸರಕಾರ ಬೇಲಿ ಹಾಕಿದೆ. ಕಳಸವಳ್ಳಿ ಗ್ರಾಮದ ಸರ್ವೆನಂಬರ್‌ 65ರಲ್ಲಿ ದೇವಸ್ಥಾನಕ್ಕೆ ಸೇರಿದೆ ಎಂದುಹೇಳಲಾದ ಒಟ್ಟು 12 ಎಕರೆ ಜಾಗವನ್ನು ಸರ್ವೆ ಮಾಡಿತಂತಿ ಬೇಲಿ ಹಾಕಲಾಗುತ್ತಿದೆ.

ಯಾವ ಕಟ್ಟಡಕ್ಕೂಹಾನಿಯಾಗದಂತೆ ದೇವಸ್ಥಾನಕ್ಕೆ ಸೇರಿದ ಜಾಗವನ್ನತೆರವುಗೊಳಿಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿತಹಶೀಲ್ದಾರ್‌ ಚಂದ್ರಶೇಖರ್‌ ನಾಯ್ಕ, ಡಿವೈಎಸ್ಪಿವಿನಯ್‌ ಶೆಟಗೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next