ಹುಣಸೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳನ್ನು ವಿರೋಧಿಸಿ ನ.27 ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೇಂದ್ರ ಸರಕಾರ ಸ್ವಾಮ್ಯದ ಕಚೇರಿಗಳ ಮುತ್ತಿಗೆ ಹಾಕಲಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಆನಂದ್ ಪಟೇಲ್ ಹುಲಿಕಟ್ಟೆ ತಿಳಿಸಿದರು.
ಪತ್ತಕರ್ತರ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಸಮಿತಿ ಕರೆಯಂತೆ ಮೈಸೂರು ಜಿಲ್ಲೆ. ತಾಲೂಕು ಮತ್ತು ಗ್ರಾಮ ಘಟಕಗಳು ಹೋರಾಟ ರೂಪಿಸುವಲ್ಲಿ ವಿಫಲವಾಗಿದ್ದು. ಇತ್ತೀಚೆಗೆ ಮುದೋಳದಲ್ಲಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಿತಿಯ ಸಭೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಘಟಕಗಳನ್ನು ಅಮಾನತಿನಲ್ಲಿಡುವ ತೀರ್ಮಾನ ತೆಗೆದುಕೊಂಡಿದ್ದು. ಡಿಸೆಂಬರ್ ಮೊದಲವಾರದಲ್ಲಿ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಕಾರ್ಯಕರ್ತ ರ ಸಮ್ಮಖದಲ್ಲಿ ನೂತನ ಪದಾಧಿಕಾರಿಗಳ ಅಯ್ಕೆ ನಡೆಯಲಿದೆ ಎಂದರು.
ಇದನ್ನೂ ಓದಿ: ಕಿಷ್ಕಿಂಧೆ ಬಳಿಯ ಅತೀ ಎತ್ತರದ ಹನುಮಾನ್ ಮೂರ್ತಿ ಶಿಲೆಗಳಿಗೆ ಪೇಜಾವರ ಶ್ರೀಗಳಿಂದ ಪೂಜೆ !
ಇನ್ನು ಎಪಿಎಂಸಿ. ಭೂ ಸುಧಾರಣಾ ಕಾಯ್ದೆ. ಆಹಾರ ಭದ್ರತಾ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿ ಬಡವರ ಜೀವನ ದುಸ್ತರಗೊಳಿಸಿದೆ. ರೈತರನ್ನು ದಿವಾಳಿ ಮಾಡಲು ಹೊರಟಿರುವ ಸರಕಾರಗಳ ವಿರುದ್ದ ಎರಡನೇ ಹಂತದ ಹೋರಾಟದಂತೆ ನ. 27 ರಂದು ಕೇಂದ್ರ ಸರಕಾರಿ ಸ್ವಾಮ್ಯದ ಕಚೇರಿ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡ ಬೆಟ್ಟೇಗೌಡ. ಇತರರು ಇದ್ದರು.