Advertisement

ಬೀಳಗಿ ಪಪಂಗೆ ಸಿದ್ಲಿಂಗೇಶ ಅಧ್ಯಕ್ಷ

01:14 PM Oct 24, 2020 | Suhan S |

ಬೀಳಗಿ: ಸ್ಥಳೀಯ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಿದ್ಲಿಂಗೇಶ ಗುರುಬಸಪ್ಪ ನಾಗರಾಳ ಅಧ್ಯಕ್ಷರಾಗಿ ಹಾಗೂ ಕಾಮಪ್ಪ ಹನುಮಂತ ದಂಧರಗಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಆ ಮೂಲಕ ದಶಕಗಳ ನಂತರ ಮತ್ತೆ ಪಪಂ ಆಡಳಿತ ಬಿಜೆಪಿ ತೆಕ್ಕೆಗೆ ಬಂದಿದೆ.

Advertisement

ಬಿಜೆಪಿ 12, ಕಾಂಗ್ರೆಸ್‌ 5 ಹಾಗೂ ಪಕ್ಷೇತರ ಓರ್ವ ಸದಸ್ಯ ಸೇರಿ ಪಪಂನಲ್ಲಿ ಒಟ್ಟು 18 ಸದಸ್ಯ ಬಲವಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲಾತಿ ಪ್ರಕಟವಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ, ಅಧ್ಯಕ್ಷರಾಗಿ ಸಿದ್ಲಿಂಗೇಶ ನಾಗರಾಳ ಮತ್ತು ಉಪಾಧ್ಯಕ್ಷರಾಗಿ ಕಾಮಪ್ಪ ದಂಧರಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಧಿಕಾರಿ ತಹಶೀಲ್ದಾರ್‌ ಭೀಮಪ್ಪ ಅಜೂರ ಅಧಿಕೃತ ಘೋಷಣೆ ಮಾಡಿದರು. ಸರಳ ಬಹಮತದ ಹಾದಿಯಲ್ಲಿರುವ ಬಿಜೆಪಿಯ ಎಲ್ಲ ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯ ಅಜೀಜ ಬಾಯಿಸರಕಾರ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಮುರುಗೇಶ ನಿರಾಣಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್‌ ಪಕ್ಷದ ಎಲ್ಲ ಐದು ಜನ ಸದಸ್ಯರು ಗೈರಾಗಿದ್ದರು. ಜಾಣ್ಮೆ ಮೆರೆದ ಬಿಜೆಪಿ ಮುಖಂಡರು: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮೇಲ್ನೋಟಕ್ಕೆ ತುರುಸಿನ ಕಣವಾಗಿ ಪರಿಣಮಿಸದಿದ್ದರೂ ಕೂಡ, ಬಿಜೆಪಿ ಆಂತರಿಕ ವಲಯದಲ್ಲಿ ಅಧ್ಯಕ್ಷ ಗಾದಿಗೆ ಹಲವರು ತೀವ್ರ ಪೈಪೋಟಿ ನೀಡಿದ್ದರು. ತಮ್ಮ ಸಮುದಾಯದ ಜನ ಮತ್ತು ಪಕ್ಷದ ಹಿರಿಯರಿಂದ ಶಾಸಕ ಮುರುಗೇಶ ನಿರಾಣಿ ಮೇಲೆ ಹಲವು ಆಕಾಂಕ್ಷಿಗಳು ಒತ್ತಡ ಹೇರುತ್ತಲೇ ಇದ್ದರು. ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವುದರ ಜತೆಗೆ ಸಿದ್ಲಿಂಗೇಶ ನಾಗರಾಳ ಅವರನ್ನು ಅಧ್ಯಕ್ಷ ಗಾದಿಯಲ್ಲಿ ಕೂಡ್ರಿಸುವ ಅನಿವಾರ್ಯತೆಯ ಹಲವು ಮಾನದಂಡಗಳನ್ನು ಪಕ್ಷದ ಹಿರಿಯರ ಮತ್ತು ಪಪಂ ಸದಸ್ಯರ ಮುಂದಿಟ್ಟು ಎಲ್ಲರ ಒಳಬೇಗುದಿಯನ್ನು ಶಮನಗೊಳಿಸುವಲ್ಲಿ ಶಾಸಕ ಮುರುಗೇಶ ನಿರಾಣಿ ಹಾಗೂ ಪಕ್ಷದ ಮುಖಂಡರು ಜಾಣ್ಮೆ ಮೆರೆದಿದ್ದಾರೆ.

ವಿಜಯೋತ್ಸವ: ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜಪ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಬಸವರಾಜ ಮೋದಿ, ಕೋಮಾರ ದೇಸಾಯಿ, ಮಲ್ಲಪ್ಪ ಶಂಭೋಜಿ, ಸಂಗಪ್ಪ ಕಟಗೇರಿ, ಬಸವರಾಜ ಬಿರಾದಾರ, ವಿಠuಲ ಬಾಗೇವಾಡಿ, ವಿಜಯಲಕ್ಷ್ಮೀ ಪಾಟೀಲ, ದಾಕ್ಷಾಯಿಣಿ ಜಂಬಗಿ, ವಿಠ್ಠಲ ಗಡ್ಡದವರ, ನಿಂಗಪ್ಪ ದಂಧರಗಿ, ರವಿ ಮದ್ರಾಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next