Advertisement
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆಒಮ್ಮೆ ಭೇಟಿ ನೀಡಿದರೆ ಇಲ್ಲಿನ ಅವ್ಯವಸ್ಥೆಗಳ ಸಾಕ್ಷಾತ್ ದರ್ಶನವಾಗುತ್ತದೆ. ಹೆಸರಿಗೊಂದು ಕಟ್ಟಡವಿದ್ದು, ಶಿಥಿಲವಾಗಿದೆ. ಹೊರಗಡೆಯಿಂದ ನೋಡಿದ ನಂತರ ಒಳಗೆ ಹೋಗಲು ಸಾಹಸ ಮಾಡುವಂತಾಗಿದೆ. ಈ ಗ್ರಂಥಾಲಯದಲ್ಲಿ ಓದುಗರಿಗೆ ಅನುಕೂಲವಾಗು ವಂತಹ ಪುಸ್ತಕಗಳಿದ್ದರೂ ಸಹ ಓದುಗರು ಗ್ರಂಥಾಲಯ ದತ್ತ ಸುಳಿಯಲು ಹಿಂಜರಿಯುತ್ತಿದ್ದಾರೆ.
Related Articles
Advertisement
ನೆನೆಯುತ್ತಿರುವ ಪುಸ್ತಕಗಳು: ಸಾರ್ವಜನಿಕ ಗ್ರಂಥಾಲಯ ಮಳೆಯಿಂದ ಅಸ್ತಿತ್ವಕ್ಕಾಗಿ ಹೋರಾಟ ನಡೆಸು ತ್ತಿದೆ. ಮತ್ತೂಂದೆಡೆ ಮಳೆ ಜೋರಾಗಿ ಬಿದ್ದರೇ ಎಲ್ಲಿ ಕುಸಿದು ಬೀಳುತ್ತದೆ ಎಂಬ ಆತಂಕ ಬಂದೊದಗಿದೆ. ಮಳೆ ಬಂದರೆ ಗ್ರಂಥಾಲಯ ಬಹುತೇಕ ಸೋರುತ್ತದೆ. ಇಲ್ಲಿರುವ ಬೆಲೆ ಬಾಳುವ ಪುಸ್ತಗಳನ್ನು ಸಂರಕ್ಷಣೆ ಮಾಡುವುದೇ ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈಗಾಗಲೇ ಮಳೆಯಿಂದ ಪುಸ್ತಕಗಳಿಗೆ ಹಾನಿಯಾಗಿದ್ದು, ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.
25 ಸಾವಿರ ಪುಸ್ತಕ, 40 ಮಂದಿ ಓದುಗರು : ಸಾರ್ವಜನಿಕ ಗ್ರಂಥಾಲಯದಲ್ಲಿ ಸುಮಾರು 25-28 ಸಾವಿರ ಪುಸ್ತಕಗಳಿವೆ. ಗ್ರಂಥಾಲಯದಲ್ಲಿ ಸುಮಾರು 1910 ಮಂದಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ವಿವಿಧ ಬಗೆಯ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಸಾಮಾನ್ಯವಾಗಿ 11 ಕನ್ನಡ ಪತ್ರಿಕೆಗಳು, 2 ಉರ್ದು, 4 ಆಂಗ್ಲ, 4 ವಾರ, 4 ಮಾಸ ಪತ್ರಿಕೆಗಳು, ಒಂದು ಹಿಂದಿ ಪತ್ರಿಕೆ ಬರುತ್ತಿದ್ದು ಶಿಥಿಲ ವ್ಯವಸ್ಥೆಯಲ್ಲಿರುವ ಗ್ರಂಥಾಲಯಕ್ಕೆ ಸುಮಾರು 40 ಮಂದಿ ಮಾತ್ರ ಓದುಗರು ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಿಡ್ಲಘಟ್ಟ ನಗರದಲ್ಲಿ ಗ್ರಂಥಾಲಯ ಶಿಥಿಲ ವ್ಯವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ನೂತನ ಗ್ರಂಥಾಲಯ ನಿರ್ಮಿಸಲು ಜಾಗ ಸಹ ಇಲಾಖೆಗೆ ಹಸ್ತಾಂತರಿಸಲಾಗಿದೆ. ಯೋಜನೆ ಮತ್ತು ಅಂದಾಜು ವೆಚ್ಚದ ಕಾಮಗಾರಿಗೆ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುವುದು. –ಶಂಕರ್, ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು
ಸಾರ್ವಜನಿಕ ಗ್ರಂಥಾಲಯ ಶಿಥಿಲವಾಗಿರುವ ಕುರಿತು ಇಲಾಖಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಮಳೆ ಬಂದರೆ ಸೋರುವುದು ನಿಜ ಆದರೂ ಸಹ ಪುಸ್ತಕಗಳು ನೆನೆಯದಂತೆ ಎಚ್ಚರ ವಹಿಸಲಾಗಿದೆ. ಗ್ರಂಥಾಲಯಕ್ಕೆ ಬರುವಓದುಗರಿಗೆ ಹೆಸರು ನೋಂದಣಿ ಮಾಡಿರುವ ಓದುಗರ ಡಿಜಿಟಲ್ ಲಾಗಿನ್ ಮಾಡಲಾಗಿದೆ. – ರಾಮಲೀಲಾ, ಗ್ರಂಥಪಾಲಕಿ, ಶಿಡ್ಲಘಟ್ಟ ಸಾರ್ವಜನಿಕ ಗ್ರಂಥಾಲಯ
ಜ್ಞಾನಾರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯ ಶಿಥಿಲವಾಗಿ ದುಸ್ಥಿತಿಯಲ್ಲಿದೆ. ಸರ್ಕಾರ, ಗ್ರಂಥಾಲಯ ಅಧಿಕಾರಿಗಳು ಗಮನಹರಿಸಿ ಇರುವ ಗ್ರಂಥಾಲಯವನ್ನು ನೆಲಸಮಗೊಳಿಸಿ ನೂತನ ಗ್ರಂಥಾಲಯವನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ. – ಗಂಜಿಗುಂಟೆ ವಸಂತಕುಮಾರ್, ಕರವೇ (ಪ್ರವೀಣ್ ಶೆಟ್ಟಿ ಬಣ) ಶಿಡ್ಲಘಟ್ಟ ತಾಲೂಕು ಅಧ್ಯಕ್ಷ