Advertisement

ಪಾಕ್‌ ಭೇಟಿಗೆ ಸಮರ್ಥನೆ; ಸಿಧು ತಲೆಗೆ 5 ಕೋಟಿ ರೂ.ಇನಾಮು!

03:23 PM Aug 21, 2018 | Team Udayavani |

ಅಮೃತಸರ: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರು ಮಂಗಳವಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

Advertisement

‘ನನಗೆ ಹೀಗೆ ಮಾಡು ಎಂದು ಯಾರೂ ಹೇಳಿರಲಿಲ್ಲ. ನನ್ನ ಆತ್ಮಸಾಕ್ಷಿಯ ಪ್ರಕಾರ ನಾನು ನಡೆದುಕೊಂಡಿದ್ದೇನೆ’ ಎಂದು ಸಿಧು ವಿವಾದದ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. 

ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಬಾಜ್ವಾರನ್ನು ಅಪ್ಪಿಕೊಂಡುದಕ್ಕೆ ಸ್ಪಷ್ಟನೆ ನೀಡಿದ ಸಿಧು ‘ನಾನು ಕುಳಿತಿದ್ದಲ್ಲಿ ಬಾಜ್ವಾ ಅವರು ಬಂದರು. ಸ್ವಾಭಾವಿಕವಾಗಿ ಎದ್ದು ನಿಂತು ಗೌರವಿಸಿದೆ. ಆ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದರು. 

‘ದಿನ ನಿತ್ಯ ಭಾರತದ ಹಲವಾರು ಮಂದಿ ಪಾಕ್‌ಗೆ ತೆರಳುತ್ತಾರೆ. ನನಗೆ ಪಾಕ್‌ ಪತ್ರಕರ್ತರು, ರಾಜಕಾರಣಿಗಳು ಮತ್ತು ಜನರು ಅಪಾರ ಪ್ರೀತಿ ತೋರಿದರು’ ಎಂದರು. 

‘ಹಿಂದೆಯೂ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮೂಡಿಸುವ ಯತ್ನಗಳು ನಡೆದಿದ್ದವು. ಮಾಜಿ ಪ್ರಧಾನಿ ದಿವಂಗತ ವಾಜಪೇಯಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಪಾಕ್‌ಗೆ ಭೇಟಿ ನೀಡಿರಲಿಲ್ಲವೆ’ ಎಂದು ಪ್ರಶ್ನಿಸಿದ ಸಿಧು ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. 

Advertisement

‘ಹಿಂದೆ ದೋಸ್ತಿ ಬಸ್‌ ಸಂಚರಿಸುತ್ತಿತ್ತು, ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನವಾಜ್‌ ಷರೀಫ್ ಅವರನ್ನು ಆಹ್ವಾನಿಸಿರಲಿಲ್ಲವೆ? ಮೋದಿ ಅವರು ತುರ್ತಾಗಿ ಲಾಹೋರ್‌ಗೆ ತೆರಳಿರಲಿಲ್ಲವೆ’ ಎಂದು ಪ್ರಶ್ನಿಸಿದರು. 

‘ಶಾಂತಿ ಮತ್ತು ಸ್ಥಿರತೆಗೆ ಉತ್ತಮ ಸಂದೇಶಗಳು ಅಗತ್ಯವಾಗಿದ್ದು , ಆಗ ಮಾತ್ರ ನಮ್ಮ ಸೈನಿಕರು ಹುತಾತ್ಮರಾಗುವುದನ್ನು ತಡೆಯಬಹುದು’ಎಂದು ಸಿಧು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಸಿಧು ನಡೆಗೆ ಪಂಜಾಬ್‌ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. 

 ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಸಿಧು ಬೆಂಬಲಕ್ಕೆ ನಿಂತಿದ್ದು ಅವರು ‘ಶಾಂತಿಯ ದೂತ’ ಎಂದಿದ್ದಾರೆ. 

ತಲೆಗೆ 5 ಕೋಟಿ ರೂ. ಘೋಷಿಸಿದ ಭಜರಂಗದಳ 
ದೇಶದ್ರೋಹ ಎಸಗಿರುವ ಸಿಧು ತಲೆ ಕಡಿದು ತಂದವರಿಗೆ 5 ಲಕ್ಷ ರೂಪಾಯಿ ಇನಾಮು ನೀಡಿರುವುದಾಗಿ ರಾಷ್ಟ್ರೀಯ ಭಜರಂಗದಳ ಆಗ್ರಾ ಘಟಕದ ಅಧ್ಯಕ್ಷ ಸಂಜಯ್‌ ಜಾಟ್‌ ಘೋಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next