Advertisement

ಸಿದ್ದು , ಎಚ್‌ಡಿಕೆ ಭದ್ರತೆ ವಾಪಸ್‌

10:10 AM Mar 18, 2020 | mahesh |

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೀಡಿದ್ದ ಪೈಲಟ್‌ ವಾಹನ ಸೇವೆಯನ್ನು ರಾಜ್ಯ ಸರಕಾರ ವಾಪಸ್‌ ಪಡೆದುಕೊಂಡಿದ್ದು, ಕೇವಲ ಎಸ್ಕಾರ್ಟ್‌ ಮಾತ್ರ ಮುಂದುವರಿಸಿದೆ.

Advertisement

ಸರಕಾರದ ಈ ನಿರ್ಧಾರವನ್ನು ವಿರೋಧಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತನಗೆ ಝಡ್‌ ಶ್ರೇಣಿಯ ಭದ್ರತೆ ಮುಂದುವರಿಸು ವಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಯಾವ ಕಾರಣಕ್ಕೆ ಭದ್ರತೆ ವಾಪಸ್‌ ಪಡೆಯಲಾಗಿದೆ ಎಂಬ ಬಗ್ಗೆ ಗೃಹ ಸಚಿವರಾಗಲಿ, ನಗರ ಪೊಲೀಸ್‌ ಆಯುಕ್ತರಾಗಲಿ ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಜತೆಗೆ

ಇತ್ತೀಚೆಗಷ್ಟೇ ಝಡ್‌ ಪ್ಲಸ್‌ ಭದ್ರತೆ ಇದ್ದದ್ದನ್ನು ಝಡ್‌ಗೆ ಇಳಿಸಲಾಗಿತ್ತು. ಅನಂತರ ಎಸ್ಕಾರ್ಟ್‌ ಸೇವೆಗೆ ಒದಗಿಸ ಲಾಗಿದ್ದ ಇನ್ನೋವಾ ಕ್ರಿಸ್ಟಾ ವಾಹನವನ್ನು ವಾಪಸ್‌ ಪಡೆದು 2.61 ಲಕ್ಷ ಕಿ.ಮೀ. ಸಂಚರಿಸಿರುವ ಸ್ಕಾರ್ಪಿಯೋ ವಾಹನ ನೀಡಲಾಗಿದೆ. ಅದು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಿಐಪಿ ಭದ್ರತೆಯ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿಗಳಿಗೆ, ವಿಪಕ್ಷ ನಾಯಕರಿಗೆ ಪೈಲಟ್‌ ಮತ್ತು ಎಸ್ಕಾರ್ಟ್‌ ಸೇವೆ ನೀಡಲಾಗುತ್ತದೆ. ಆದರೆ ಯಾವುದೇ ಕಾರಣ ನೀಡದೆ ಸಿದ್ದರಾಮಯ್ಯ ಮತ್ತು ಎಚ್‌ಡಿಕೆ ಅವರ ಪೈಲಟ್‌ ವಾಹನಗಳನ್ನು ಸೋಮ ವಾರ ಬೆಳಗ್ಗಿನಿಂದ ವಾಪಸ್‌ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next