ಬಾಗಲಕೋಟೆ: 2018ರಲ್ಲಿ ಸಿದ್ದರಾಮಯ್ಯನವರಿಗೆ ಏ ಬಾದಾಮಿ ಕ್ಷೇತ್ರದ ಜನ ರಾಜಕೀಯ ಪುನರ್ಜನ ಬ ನೀಡಿದ್ದು ಎಷ್ಟು ದಿಟವೋ, ಸಿದ್ದರಾಮಯ್ಯ ಕೂಡ ಕ್ಷೇತ್ರದ ಜನರ ಬಗ್ಗೆ ಇಂದಿಗೂ ಅಪಾರ ಕಾಳಜಿ-ಕಕ್ಕುಲತೆ ವ ಹೊಂದಿದ್ದಾರೆ. ಐದು ವರ್ಷ ಬಾದಾಮಿ ಕ್ಷೇತ್ರದಲ್ಲಿ ಜನ ನೆನಪಿಡುವಂತಹ ಕಾರ್ಯ ಮಾಡಿದ್ದಾರೆ.
ಹೌದು, ಬಾದಾಮಿ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಜ ಕುಡಿಯುವ ನೀರಿನ ಸಮಸ್ಯೆ ಇತ್ತು. ಗುಳೇದಗುಡ್ಡಕ್ಕೆ ನಿ ಇರುವ ಶಾಶ್ವತ ಕುಡಿಯುವ ನೀರಿನ ಯೋಜನೆಯಂತೆ ಬಾದಾಮಿ, ಕೆರೂರ ಪಟ್ಟಣಗಳಿಗೂ ಕಲ್ಪಿಸಿ ಎಂಬ ಬೇಡಿಕೆ ಬಹು ವರ್ಷಗಳಿಂದಲೂ ಇತ್ತು. ಅದನ್ನು ಕೆ ಸಾಕಾರಗೊಳಿಸಿದ್ದು ಸಿದ್ದರಾಮಯ್ಯನವರು. ಆಲಮಟ್ಟಿ ಗ ಜಲಾಶಯದಿಂದ ಬಾದಾಮಿ, ಕೆರೂರ ಪಟ್ಟಣ ಹಾಗೂ ಕೆ ಈ ಮಾರ್ಗ ಮಧ್ಯೆ ಬರುವ ಕ್ಷೇತ್ರದ 18 ಹಳಿಗಳಿಗೆ ದಿನ 24 ಗಂಟೆ ಶಾರತ ಕುಡಿಯುವ ನೀರಿನ ಯೋಜನೆಯನ್ನು ನ 227.80 ಕೋಟಿ ರೂ. ವೆಚ್ಚದಲ್ಲಿ ಮಂಜೂರು ಮಾಡಿಸಿದ್ದಾರೆ.
ನದಿಗೆ ನಿರಂತರ ನೀರು: ಪ್ರತಿ ವರ್ಷ ಬೇಸಿಗೆಯಲ್ಲಿ ಮಲಪ್ರಭಾ ನದಿಗೆ ನೀರು ಬಿಡುವಂತೆ ರೈತರ ಹೋರಾಟ, ಒತ್ತಾಯ: ಸಾಮಾನ್ಯವಾಗಿತ್ತು. ಸಿದ್ದರಾಮಯ್ಯನವರು, ಐದು ವರ್ಷಗಳಲ್ಲಿ ಒಂದೇ ಒಂದು ದಿನವೂ ನದಿ ಬತ್ತದಂತೆ ನೋಡಿದ್ದರು. ಇದರಿಂದ ಇದು ರೈತರ ಬದುಕಿಗೆ ಸಂಜೀವಿನಿಯಾಗಿದೆ ಎಂದರೆ ತಪ್ಪಲ್ಲ. ಇನ್ನು ಮುಖ್ಯವಾಗಿ ಕೆರೂರ ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ 15 ವರ್ಷಗಳ ಹಿಂದೆಯೇ ಕಾಲುವೆ ನಿರ್ಮಾಣಗೊಂಡರೂ ನೀರು ಕಂಡಿರಲಿಲ್ಲ. ಅದಕ್ಕಾಗಿ ಹೆರಕಲ್ ಬಳಿ ಹೊಸ ಜಾಕ್‌ವೆಲ್ ನಿರ್ಮಿಸಿ, ನೀರಾವರಿ ಕಲ್ಪಿಸುವ ಕೆರೂರ ಏತ ನೀರಾವರಿಯನ್ನು ಹೊಸದಾಗಿ ರೂಪಿಸಿ, 550 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದ 16 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಕೆರೆಗಳಿಗೆ ನೀರು: ಮತಕ್ಷೇತ್ರದ ಪ್ರಮುಖ ಪರ್ವತಿ, ಗಂಜಿಕರೆಗೆ ನೀರು ತುಂಬಿಸಲು 12 ಕೋಟಿ ರೂ ಕೆಂದೂರ ಕರೆಗೆ ನೀರು ತುಂಬಿಸಲು 5 ಕೋಟಿ ರೂ. ಅನುದಾನ ಕಲಿಸಿದ್ದು, ಕರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸಲಾಗಿದೆ. ಕೇತ್ರದ ಪ.ಜಾತಿ, ಮ.ರಂಗದ ಜನರಿಗೆ ಹಲವ ಸಮುದಾಯ ಭವನ ನಿರ್ಮಾಣಕ್ಕೆ 15 ಕೋಟಿ ರೂ.. ಕ್ಷೇತ್ರದ ಎಲ್ಲ ಗ್ರಾಮಗಳ ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ, ಸಿಸಿ ರಸ್ತೆ, ಚರಂಡ ನಿರ್ಮಾಣಕ್ಕೆ ವಿವಿಧ ಇಲಾಖೆಗಳಿಂದ ಅಂದಾಜು 250 ಕೋಟಿ ರೂ.ಅನುದಾನ ಕಲ್ಪಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ 368 98 ಕೋಟಿ ರೂ., ಚೋಳಚಗುಡ್ಡ, ಪಟ್ಟದಕಲ್ಲ ಆಲೂರ ಎಸ್.ಕೆ. ಗ್ರಾಮಗಳಲ್ಲಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣಕ್ಕೆ ಸುಮಾರು 70 ಕೋಟಿ ರೂ., ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಹೊಸ ಕಟ್ಟಡ, ಹಳೆಯ ಕಟ್ಟಡಗಳ ದುರಸ್ತಿಗಾಗಿ ಸುಮಾರು 280 ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಪ್ಲಾಜಾ, ಸ್ಟಾರ್ ಹೊಟೇಲ್ ನಿರ್ಮಾಣಕ್ಕೆ 60 ಕೋಟಿ ರೂ., ಡಾ| 1.60. ಅಂಬೇಡ್ಕರ್, ಮೊರಾರ್ಜಿ, ಇ೦ದಿರಾ ವಸತಿ ನಿಲಯಗಳ ಕಟ್ಟಡ, ವಸತಿ ನಿಲಯಗಳ ನಿರ್ಮಾಣಕ್ಕೆ 180 ಕೋಟಿ ರೂ., ಜಲಜೀವನ ಮಿಷನ್ ಅಡಿ 300 ಕೋಟಿ ರೂ. ಅನುದಾನ ಬಂದಿದೆ.
ಕರೂರ ನಾಡಕಚೇರಿಗೆ ಭೂಮಿ: ಗುಳೇದಗುಡ್ಡ, ಕೆರೂರ ಪಟ್ಟಣಗಳಿಗೆ ವಿವಿಧ ಇಲಾಖೆಯಿಂದ ಸುಮಾರು 150 ಕೋಟಿ ರೂ., ಕರೂರ ಪಟ್ಟಣದಲ್ಲಿ ಕೆಐಡಿಬಿ ಇಲಾಖೆಯಿಂದ 40 ಎಕರ ಭೂಮಿ ಮಂಜೂರು ಮಾಡಿದ್ದು, ನಾಡ ಕಚೇರಿ, ಬಸ್ ತೀವೋ, ಸಬ್ ರಿಜಿಸ್ಟರ್, ಮೊರಾರ್ಜಿ ವಸತಿ ಶಾಲೆಗಳು, ಸರ್ಕಾರದ ವಿವಿಧ ಕಟ್ಟಡಗಳು, ಪ್ರೌಢಶಾಲೆ, ಕಾಲೇಜು ಕಟ್ಟಡಗಳಿಗೆ ಬಳಕೆಯಾಗಲಿದೆ. ಬಾದಾಮಿಯಲ್ಲಿ ಮಿನಿ ವಿಧಾನಸೌಧ ಭವನ ನಿರ್ಮಾಣಕ್ಕೆ 10 ಕೋಟಿ ರೂ., ಬನಶಂಕರಿ ದೇವಸ್ಥಾನ ಅಭಿವೃದ್ಧಿಗಾಗಿ 2 ಕೋಟಿ ರೂ., ಅಲ್ಪಸಂಖ್ಯಾತರ ಇಲಾಖೆಯಿಂದ ಕ್ಷೇತ್ರದ ನಗರ-ಪಟ್ಟಣ-ಗ್ರಾಮಗಳಲ್ಲಿ ಶಾದಿಮಹಲ್, ರಸ್ತೆಗಳ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಕ್ಕೆ 25 ಕೋಟಿ ರೂ., ಕೆಬಿಜೆಎನ್ ಎಲ್‌ದಿಂದ ಸಿಸಿ ರಸ್ತೆ ಹಾಗೂ ಸಮುದಾಯ ಭವನ, ಕೊಳವೆಬಾವಿ ಕೊರೆಸಲು ಸುಮಾರು 40 ಕೋಟಿ ರೂ., ಕೆರೂರ, ಕರಡಿಗುಡ್ಡ ಗ್ರಾಮಗಳಿಗೆ ಹೊಸ ಪ್ರೌಢಶಾಲೆ ಮಂಜೂರು, ಕರಡಿಗುಡ್ಡಕ್ಕೆ ಪಶು ಆಸ್ಪತ್ರೆ ಮಂಜೂರು, ಗುಳೇದಗುಡ್ಡಕ್ಕೆ ಸರ್ಕಾರಿ, ಪ್ರಥಮ ದರ್ಜೆ ಕಾಲೇಜು ಮಂಜೂರು, ಬಾದಾಮಿ-ಬನರಂಕರಿ ದೇವಾಲಯದವರೆಗೆ ರಸ್ತೆ ಅಭಿವೃದ್ಧಿ, ದೇವಸ್ಥಾನ ಆವರಣ ಹಾಗೂ ಸಮಗ ಅಭಿವೃದ್ಧಿಗೆ 18 ಕೋಟಿ ರೂ.ಬನಶಂಕರಿ ದೇವಸ್ತಾನ ಆವರಣದ ಪವಿತ್ರ ಹರಿದ್ರಾತೀರ್ಥ ಹೊಂಡ ತು೦ಬಿಸಲು 1 ಕೋಟಿ ರೂ.ಸಹಿತ ಅವರ ಅವಧಿಯಲ್ಲಿ ಒಟ್ಟಾರೆ 4200 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದು ಅವರ ಅಭಿಮಾನಿಗಳ ಹೆಮ್ಮೆಯ ಮಾತು.