ಮುಧೋಳ: ಬೆಂಗಳೂರಿನಲ್ಲಿ ನಾಲ್ಕು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಮೆರೆದ ದುಷ್ಕರ್ಮಿಗಳು ರಾಕ್ಷಸಿ ಪ್ರವೃತ್ತಿ ಹೊಂದಿದವರು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೃತ್ಯ ಎಸಗಿದವರ ವಿರುದ್ದ ಹರಿಹಾಯ್ದರು.
ಜಮೀರ್ ಅಹ್ಮದ ಅವರೇ ಇದು ನಿಮ್ಮ ಕ್ಷೇತದಲ್ಲಾಗಿರುವ ಘಟನೆ ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು. ಜಮೀರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಹಸು ಹಿಂದುಗಳಿಗೆ ಪೂಜ್ಯ ಪ್ರಾಣಿ, ಅದನ್ನ ಪೂಜಿಸ್ತೀವಿ ಹಸು ನಮಗೆ ಪೂಜೆಗೋಸ್ಕರ ಇರುವ ಪ್ರಾಣಿ ಅಲ್ಲ ಹಸು ನಮಗೆ ಅನ್ನ ಹಾಕುತ್ತೆ, ಕೆಲಸ ಕೊಡುತ್ತದೆ, ಔಷಧಿ ಕೊಡುತ್ತೆ, ಗೊಬ್ಬರ ಕೊಡುತ್ತೆ, ರೈತನ ಬೆನ್ನೆಲುಬಾಗಿರುವ ಹಸುಗಳ ಕೆಚ್ಚಲು ಕೊಯ್ದು ನೀಚರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಈ ಪ್ರಕರಣದಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿದರೆ ರಾಜ್ಯಾದ್ಯಂತ ಶ್ರೀರಾಮಸೇನೆ ಜಮೀರ್ ಅಹ್ಮದ್ ವಿರುದ್ಧ ಹೋರಾಟ ಮಾಡುತ್ತೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣದಿಂದಾಗಿ ನಿರಂತರ ಗೋ ವಧೆ ಆಗ್ತಿವೆ. ಕಸಾಯಿಖಾನೆ ತಡೆಯಬೇಕು, ಇಂದಿನ ಘಟನೆ ಬಹಳ ಭಯಾನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ