Advertisement
ನಗರದ ಚಂದ್ರದರ್ಶನ ಸಮುದಾಯಭವನದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಪರ ಮತಪ್ರಚಾರದ ಬಹಿರಂಗಸಭೆ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಇದನ್ನೂ ಓದಿ : ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್
ದೇಶದ ಸಂವಿಧಾನವನ್ನು ಉಳಿಸಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಜೆಡಿಎಸ್ ಪಕ್ಷ ಒಂದು ಪ್ರಾದೇಶಿಕ ಪಕ್ಷವಾಗಿದೆ. ದೇಶ ಹಾಗೂ ಸಂವಿಧಾನ ಉಳಿಸಲು ಸಾಧ್ಯವಿಲ್ಲ. ದೇಶದ ಸಂವಿಧಾನವನ್ನು ಉಳಿಸುವ ಮೂಲಕ ದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಸ್ಥಾಪಕ ಹೆಗಡೆವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ:ಬಿಜೆಪಿ ಸರ್ಕಾರ ಮಕ್ಕಳ ಜ್ಞಾನ ವಿಕಾಸ ಮಾಡುವ ಬದಲು ಹಿಂದುತ್ವ ಹಾಗೂ ಧರ್ಮ ಬೋಧನೆ ಮಾಡಲು ಹೊರಟಿದೆ. ಪಠ್ಯ ಪುಸ್ತಕದಲ್ಲಿ ಭಗತ್‌ಸಿಂಗ್, ನಾರಾಯಣಗುರು ಪಾಠವನ್ನು ಕೈಬಿಟ್ಟಿದೆ. ಅಲ್ಲದೆ, ಕುವೆಂಪು ಅವರ ನಾಡಗೀತೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಆರ್‌ಎಸ್‌ಎಸ್ ಸ್ಥಾಪಕ ಹೆಗಡೆವಾರ್ ದೇಶಕ್ಕಾಗಿ ಏನು ಮಾಡಿಲ್ಲ. ಯಾವ ಸ್ವಾತಂತ್ರ್ಯ ಹೋರಾಟಗಾರರು ಅಲ್ಲ. 1925ರಲ್ಲಿ ಆರ್‌ಎಸ್‌ಎಸ್ ಸಂಘ ಸ್ಥಾಪನೆ ಮಾಡಿದರು. ಆದರೆ ಯಾವುದೇ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿಲ್ಲ. ಇವರೆಲ್ಲ ಸೇರಿ ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಲು ಬ್ರಿಟಿಷರೊಂದಿಗೆ ಕೈಜೋಡಿಸಿದ್ದವರು. ಇಂಥವರ ಪಾಠ ಮಕ್ಕಳಿಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಕೆಪಿಸಿಸಿ ಅಧ್ಯಕ್ಷ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಸಂಸದ ಆರ್.ದ್ರುವನಾರಾಯಣ್, ಮಾಜಿ ಶಾಸಕ ರಮೇಶ್‌ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಮುಖಂಡರಾದ ಡಾ.ಕೃಷ್ಣ, ರವಿಕುಮಾರ್‌ಗಣಿಗ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಡಾ.ಎಚ್.ಎನ್.ರವೀಂದ್ರ ಸೇರಿದಂತೆ ಮತ್ತಿತರರಿದ್ದರು.