Advertisement
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ತಾನೊಬ್ಬ ಅಹಿಂದ ವರ್ಗದ ನಾಯಕ ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ ಈಗ ಅಹಿಂದ ವರ್ಗದ ನಾಯಕರನ್ನು ಪಕ್ಷಾತೀತವಾಗಿ ಮುಗಿಸಲು ಮುಂದಾಗಿದ್ದಾರೆ ಎಂದು ದೂರಿದೆ.
ಇದಕ್ಕೆ ನೂರಾರು ದೃಷ್ಟಾಂತಗಳಿವೆ.ದಲಿತ ನಾಯಕ ಪರಮೇಶ್ವರ್ ಅವರನ್ನು ಸೋಲಿಸಿ, ಇಬ್ರಾಹಿಂ ಅವರನ್ನು ಪಕ್ಷದಿಂದ ಓಡಿಸಲು ಸಂಚು ನಡೆಸಿದರು.ಈಗ ಹಿಂದುಳಿದ ಸಮಾಜದ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ ಅಹಿಂದ ವಿರೋಧಿ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ ? ಎಂದು ಪ್ರಶ್ನಿಸಿದೆ. ಹಿಂದುಳಿದ ಸಮಾಜಕ್ಕೆ ನಾನೇ ಪ್ರಶ್ನಾತೀತ ನಾಯಕ ಎಂದು ಭ್ರಮಿಸಿರುವ ಸಿದ್ದರಾಮಯ್ಯ ಅವರು ಈಗ ಕುಟುಂಬ ರಾಜಕಾರಣಕ್ಕೆ ಇಳಿದಿದ್ದಾರೆ. ತಮ್ಮ ಪುತ್ರ ಡಾ. ಯತೀಂದ್ರ ಅವರನ್ನು ಮುನ್ನೆಲೆಗೆ ತರಲು ಈಗ ತನ್ನದೇ ಸಮಾಜದ ಪ್ರಭಾವಿ ನಾಯಕರನ್ನು ಈಗಿಂದೀಗಲೇ ಮಟ್ಟಹಾಕಲು ಷಡ್ಯಂತ್ರ್ಯ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದೆ.