ಬೆಂಗಳೂರು: ವೀರ ಸಾವರ್ಕರ್ ಅವರು ಅಂಡಮಾನ್‌ನಲ್ಲಿದ್ದ ಜೈಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಬೇಕು. ಆಗ ಅವರಿಗೆ ವಾಸ್ತವದ ಅರಿವಾಗಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ತುಳು ಕೂಟ ಆಯೋಜಿಸಿದ್ದ ಪುದ್ದಾರ್ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಸಿದ್ದ ರಾಮಯ್ಯ ಅವರನ್ನು ಹಡಗಿನಲ್ಲಿ ಅಂಡ ಮಾನ್, ನಿಕೋಬಾರ್‌ಗೆ ಕಳುಹಿಸಿಕೊಡ ಬೇಕು. ಸಾವರ್ಕರ್ ವಾಸವಿದ್ದ ಜೈಲಿನ ಕೋಣೆಯ ಸ್ಥಿತಿಗತಿ ನೋಡಿಕೊಂಡು ಸಿದ್ದರಾಮಯ್ಯ ಬರಬೇಕು. ಆಗಲಾದರೂ ವಾಸ್ತವದ ಅರಿವು ಆಗಬಹುದು. ಕೆಲಸ ಇಲ್ಲದೇ ಏನೇನೋ ಮಾತನಾಡುವುದಲ್ಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರ ಕೆಟ್ಟ ಬುದ್ಧಿ ಅಂಡಮಾನ್ ಜೈಲು ನೋಡಿ ಬಂದ ನಂತರ ಸರಿ ಹೋಗಬಹುದು. ಅಲ್ಲಿನ ವಾತಾವರಣ ನೋಡಿದರೆ ಸಿದ್ದರಾಮಯ್ಯಗೆ ವಾಸ್ತವ ಅರ್ಥ ಆಗಬಹುದು. ಸಿದ್ದರಾಮಯ್ಯ ಅವರಿಗೆ ಸದ್ಯ ಬೇರೆ ಏನೂ ಕೆಲಸ ಇಲ್ಲ. ರಾತ್ರಿ ನಿದ್ದೆಗೆಟ್ಟು ಏನು ಮಾಡ ಬೇಕೆಂಬ ಯೋಚನೆಯಲ್ಲಿರು ತ್ತಾರೆ. ಅಂತ ಸಮಯದಲ್ಲಿ ಈ ರೀತಿಯ ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಈಡಾಗುತ್ತಾರೆ ಎಂದರು.
5 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಇದೇ ಸಿದ್ದರಾಮಯ್ಯ ಅವರನ್ನು ನಾವು ಸಹಿಸಿಕೊಂಡೆವಲ್ಲಾ ಎಂಬ ಪ್ರಶ್ನೆ ಮೂಡುತ್ತಿದೆ. ಚರಿತ್ರೆಯನ್ನು ಮತ್ತೆ ತಾನೇ ಬರೆಯುತ್ತೇನೆ ಎಂಬ ಹುಂಬುತನದ ಕೆಲಸ ಸರಿಯಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಆಡಳಿತಾವಧಿಯಲ್ಲಿ ಸಾವರ್ಕರ್ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಇಂದಿರಾ ಗಾಂಧಿ ಇವರ ನಾಯಕರಲ್ಲವೇ? ಸುಮ್ಮನೆ ಅವರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದ್ದರೇ? ಇಂತಹ ವ್ಯಕ್ತಿಯನ್ನು 5 ವರ್ಷ ಮುಖ್ಯ ಮಂತ್ರಿಯಾಗಿ ಸಹಿಸಿಕೊಂಡಿರೋದೇ ದೊಡ್ಡ ವಿಚಾರ ಎಂದು ಹೇಳಿದರು.
ಪಕ್ಷದ ವರಿಷ್ಠರ ತೀರ್ಮಾನ ಪಾಲಿಸುತ್ತೇವೆ: ಅನರ್ಹಗೊಂಡಿರುವ ಶಾಸಕ ಎಸ್. ಟಿ.ಸೋಮಶೇಖರ್ ಅವರ ಬಿಜೆಪಿ ಸೇರ್ಪ ಡೆಗೆ ಯಶವಂತಪುರ ಬಿಜೆಪಿ ಘಟಕದಲ್ಲಿ ಪರ, ವಿರೋಧ ಅಭಿಪ್ರಾಯ ಇರುವ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು.