Advertisement

ಹಿಂದೆಯೂ ಹುಟ್ಟುಹಬ್ಬ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ಈ ಬಾರಿ ಮಾತ್ರ…: ಸಿದ್ದರಾಮಯ್ಯ

02:32 PM Jul 02, 2022 | Team Udayavani |

ಬೆಂಗಳೂರು: ನನ್ನ 75ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮವನ್ನು ಬಿಜೆಪಿಯವರು ಹಾಸ್ಯೋತ್ಸವ ಎಂದು ಟ್ವೀಟ್ ಮಾಡಿದ್ದಾರೆ‌. ಹಾಗಾದರೆ ಮೊನ್ನೆ ಸಚಿವ ಅಶೋಕ ಹುಟ್ಟುಹಬ್ಬ ಮಾಡಿಕೊಂಡಿದ್ದಕ್ಕೆ ಏನು ಹೇಳುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಮೃತ ಮಹೋತ್ಸವ ಆಗುತ್ತಿದೆ. ಅದನ್ನು ನನ್ನ ಹಿತೈಷಿಗಳು, ಸ್ನೇಹಿತರು ಮಾಡುತ್ತಿದಾರೆ. ನಾನು ಒಪ್ಕೊಡಿದ್ದೇನೆ. ನನ್ನ ಜನ್ಮದಿನಾಚರಣೆ ಈವರೆಗೂ ಮಾಡಿಕೊಂಡಿಲ್ಲ, ಮುಂದೆಯೂ ಆಚರಣೆ ಮಾಡುವುದಿಲ್ಲ. ಈಗ ಆಗುತ್ತಿರುವ ಆಚರಣೆಯೂ ನಿಜ ದಿನಾಂಕದಂದಲ್ಲ. ಯಡಿಯೂರಪ್ಪ 75 ವರ್ಷ ಆಚರಣೆ ಮಾಡ್ಕೊಳ್ಲಿಲ್ವಾ? ನಾನೂ ಹೋಗಿದ್ದೆ, ನಾನು ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿ? ಹಿತೈಷಿಗಳು ಒಪ್ಕೊಳಿ ಅಂದಿದ್ದಾರೆ. ಒಪ್ಪಿದ್ದೇನೆ ಎಂದರು.

ಹಾಸ್ಯೋತ್ಸವ ಅಂತ ಟ್ವೀಟ್ ಮಾಡಿದ್ದಾರೆ, ಅಶೋಕ್ ನದ್ದು ಆಯ್ತು ನೆನ್ನೆ ಅದಕ್ಕೆ ಏನ್ ಹೇಳುತ್ತಾರೆ? ಹೊಟ್ಟೆ ಕಿಚ್ಚಿಂದ ಹೀಗೆ ಮಾಡುತ್ತಿದ್ದಾರೆ, ಅದಕ್ಕೆ ಕಿಮ್ಮತ್ತು ಇಲ್ಲ ಎಂದರು.

ಸಿದ್ದರಾಮೋತ್ಸವಕ್ಕೆ ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಬರುವ ವಿಚಾರ, ದೇಶಪಾಂಡೆ ಕಮಿಟಿ ನಿರ್ಧಾರ ಮಾಡುತ್ತದೆ ಎಂದರು.

ಇದನ್ನೂ ಓದಿ:ಶಾಲೆಗಳ ಅವ್ಯವಸ್ಥೆ: ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಎಚ್ ಡಿಕೆ

Advertisement

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಬಾರದು ಎಂಬ ರಾಹುಲ್ ಗಾಂಧಿ ಸೂಚಿಸಿರುವುದು ನನಗೆ ಗೊತ್ತಿಲ್ಲ. ನಮಗೆ ಏನ್ ಮಾಡಬೇಕು ಮಾಡಬಾರದು ಗೊತ್ತಿಲ್ವ? ಕುಮಾರಸ್ವಾಮಿ ಬಗ್ಗೆ ನಾನು ಮಾತಾಡಲ್ಲ ಎಂದರು.

ದೇವೇಗೌಡರ ಬಗ್ಗೆ ರಾಜಣ್ಣ ಮಾತನಾಡಿ ವಿಚಾರಕ್ಕೆ, ನಾನು ಮತ್ತೆ ಮಾತನಾಡುವುದಿಲ್ಲ. ಕೆ.ಎನ್.ರಾಜಣ್ಣ ಕ್ಷಮೆ ಕೇಳಿದ್ದಾರೆ, ಮತ್ತೆ ಅದರ ಬಗ್ಗೆ ಮಾತನಾಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next