ಚಿಕ್ಕಬಳ್ಳಾಪುರ: ಜನರ ಕಷ್ಟ ಕೇಳಲಿಕ್ಕೆ ಇವರು ಸರ್ಕಾರದಲ್ಲಿರುವುದು ಜನರ ಕಷ್ಟಕೇಳಿ ಪರಿಹಾರ ಕೊಡಲು ಆಗದಿದ್ದರೇ ಅಧಿಕಾರ ಬಿಟ್ಟು ತೊಲಗಲಿ ಇವರು ಒಂದು ನಿಮಿಷ ಅಧಿಕಾರದಲ್ಲಿ ಇರಲಕ್ಕೆ ಲಾಯಕ್ಕು ಅಲ್ಲ ಜನರ ಕಷ್ಟ ಕೇಳಕ್ಕೆ ಅಲ್ಲ ಅಧಿಕಾರದಲ್ಲಿರುವುದು ಜನ ಅಧಿಕಾರ ಕೊಟ್ಟಿರುವುದು ಏನಕ್ಕೆ ಕಷ್ಟ ಬಂದಾಗ ಪರಿಹಾರ ಮಾಡಿ ಅಂತಾ ಜನ ಅಧಿಕಾರ ಕೊಟ್ಟಿರುವುದು ಅವರ ಮನೆ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲವೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿರುಧ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿತ್ತು ಅವರು ಏನು ಮಾಡಿಲ್ಲವೆಂದು ದೂರಿದ ಮಾಜಿ ಮುಖ್ಯಮಂತ್ರಿಗಳು ಎನ್.ಡಿ.ಆರ್.ಎಫ್.ನಿಯಮದ ಪ್ರಕಾರ ರೈತರಿಗೆ ಕಡಿಮೆ ಪರಿಹಾರ ಸಿಗುತ್ತದೆ ಒಂದು ಹೆಕ್ಟೇರ್‍ಗೆ 6800 ರೂಗಳು ಪರಿಹಾರ ಕೊಡ್ತಾರೆ ಒಂದು ಎಕರೆಗೆ ಎರಡೂವರೆ ಸಾವಿರ ಪರಿಹಾರ ಬರುತ್ತದೆ ಅದರಿಂದ ಏನು ಉಪಯೋಗವಾಗಲ್ಲ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
25 ಸಾವಿರ ಪರಿಹಾರ ಕೊಟ್ಟಿದೆ: ರಾಜ್ಯದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ರಾಯಚೂರು ಮತ್ತು ಮಾನವೀಯ ಭಾಗದಲ್ಲಿ ಆಲಿಕಲ್ಲು ಮಳೆಯಿಂದ ಭತ್ತ ಇನ್ನಿತರೆ ಬೆಳೆಗಳು ನಾಶವಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾಗ( 2015-16ನೇ ಸಾಲಿನಲ್ಲಿ) ಒಂದು ಹೆಕ್ಟೇರ್‍ಗೆ 25 ಸಾವಿರ ರೂಗಳ ಪರಿಹಾರವನ್ನು ನೀಡಿದ್ದೆ ಅದೇ ರೀತಿಯಲ್ಲಿ ಸರ್ಕಾರವೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಿ ಅವರ ನೆರವಿಗೆ ಧಾವಿಸಬೇಕೆಂದರು.
ನೀರು ಹರಿಯಲು ವ್ಯವಸ್ಥೆ ಮಾಡಿ: ಜಿಲ್ಲೆಯಲ್ಲಿ ಮಳೆಯಿಂದ ಕೆರೆಗಳು ಕೋಡಿ ಹರಿಯುತ್ತಿರುವುದರಿಂದ ನೀರು ಸರಾಗವಾಗಿ ಹರಿಯಲು ಸೂಕ್ತ ಕಾಲುವೆಗಳ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಮಳೆಯ ಪ್ರಭಾವದಿಂದ ಮನೆ ಮತ್ತು ಬೆಳೆ ಕಳೆದುಕೊಂಡಿರುವ ರೈತರಿಗೆ ತಕ್ಷಣೆ ಪರಿಹಾರ ಸಿಗುವಂತೆ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ತಕ್ಷಣ ಮಾಡಬೇಕು ಅಕ್ರಮವಾಗಿ ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲಿ,ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ,ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹಮದ್, ಗೌರಿಬಿದನೂರಿನ ಶಾಸಕ ಎನ್.ಎಚ್.ಶಿವಶಂಕರ್‍ರೆಡ್ಡಿ,ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ವಕೀಲ ನಾರಾಯಣಸ್ವಾಮಿ,ಕೆಪಿಸಿಸಿ ಸದಸ್ಯ ವಿನಯ್ ಎನ್ ಶ್ಯಾಮ್, ಮುನೇಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೇಶವರೆಡ್ಡಿ,ರಫೀಉಲ್ಲಾ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಮೋಹನ್‍ರೆಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುದಾಸೀರ್ ದಾವೂದ್,ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಸಾವಿತ್ರಮ್ಮ, ಮಮತಾಮೂರ್ತಿ, ಮುನೀಂದ್ರ, ಮತ್ತಿತರರು ಉಪಸ್ಥಿತರಿದ್ದರು.