Advertisement

ತಂದೆ ಚೆಕ್ ಮೂಲಕ, ಮಗ ಆರ್ ಟಿಜಿಎಸ್ ಮೂಲಕ ಲಂಚ: ಬಿಎಸ್ ವೈ ಕುಟುಂಬದ ವಿರುದ್ಧ ಸಿದ್ದು ಟೀಕೆ

04:11 PM Nov 23, 2020 | keerthan |

ರಾಯಚೂರು: ಹಿಂದೆ ಬಿ.ಎಸ್.ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ ಅವರ ಮಗ ಈಗ ಆರ್ ಟಿಜಿಎಸ್ ಮೂಲಕವೇ ಲಂಚ ಪಡೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ. ಕೋವಿಡ್ ನಿಯಂತ್ರಣ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಇವರನ್ನು ಮನುಷ್ಯರು ಎನ್ನಬೇಕೊ? ಅಥವಾ ರಾಕ್ಷಸರು ಎನ್ನಬೇಕೊ? ಇವರೆಲ್ಲ ಮನುಷ್ಯತ್ವ ಇಲ್ಲದವರು ಎಂದ ಜರಿದರು.

ಭತ್ತಕ್ಕೆ ಬೆಂಬಲ ಬೆಲೆ‌ ಕೊಡಲೇಬೇಕು. ಬೆಂಬಲ ಬೆಲೆ ನಿಮ್ಮಪ್ಪನ‌ ಮನೆಯಿಂದ ಕೊಡುತ್ತಿಯಾ ಯಡಿಯೂರಪ್ಪ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, ಈ ಕುರಿತು ಡಿಸೆಂಬರ್ ನಲ್ಲಿ ನಡೆಯುವ ಅಧಿವೇಶನ‌ದಲ್ಲಿ ಪ್ರಶ್ನಿಸುತ್ತೇನೆ. ಕನಿಷ್ಠ 500 ರೂ. ಬೆಂಬಲ ಬೆಲೆ ನೀಡಲೆಬೇಕು. ಕೊಡದಿದ್ದಲ್ಲಿ ಅಧಿವೇಶನದಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.

ಇದನ್ನೂ ಓದಿ:ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆ ನೀಡಬೇಕು ಎಂದು ಜನರಿಗೆ ಕರೆಕೊಟ್ಟ ಅವರು, ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ನರೇಂದ್ರ ಮೋದಿ. ಕೋವಿಡ್ -19 ನಿಯಂತ್ರಣಕ್ಕೆ ಔಷಧ ಕಂಡು ಹಿಡಿಯುವುದು ಬಿಟ್ಟು ದೀಪ ಹಚ್ಚಿ ಗಂಟೆ ಬಾರಿಸಿದ್ರೆ ಸೋಂಕು ಹೋಗುತ್ತಾ ಎಂದು ವ್ಯಂಗ್ಯವಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next