Advertisement

ಸಿದ್ದರಾಮಯ್ಯನವರೇ ಮಡಿಕೇರಿ ಮುತ್ತಿಗೆ ಹಿಂತೆಗೆದುಕೊಳ್ಳಿ: ಹೆಚ್.ವಿಶ್ವನಾಥ್

03:20 PM Aug 22, 2022 | Team Udayavani |

ಮೈಸೂರು: ನಾಡಿನ ಹಿತ, ರಾಜಕಾರಣದ ಗೌರವರದ ಪರವಾಗಿ ಮಡಿಕೇರಿ ಮುತ್ತಿಗೆ ಕಾರ್ಯಕ್ರಮ ಹಿಂದೆ ತಗೆದುಕೊಳ್ಳಿ.ಚುನಾವಣೆ ಹತ್ತಿರ ಬರುತ್ತಿದೆ, ಎನಾದರು ಅನಾಹುತ ಆದರೆ ಯಾರು ಹೊಣೆ ಎಂದು ಸಿದ್ದರಾಮಯ್ಯ ಅವರಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದೆ ವಿಚಾರ ಬಹಳ ದೊಡ್ಡದಾಗಿದೆ.ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಕೊಡಗಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಜೋರಾಗುತ್ತಿದೆ. ಸಿದ್ದರಾಮಯ್ಯ ರಾಜಕೀಯ ಮುತ್ಸದ್ದಿ,ರಾಜಕೀಯ ಏಳು ಬೀಳು ಕಂಡವರು ಎಂದರು.

ಮೊಟ್ಟೆ ಎಸೆಯೋದು ಸರಿ ಅಂತಾ ನಾವ್ಯಾರೂ ಹೇಳುತ್ತಿಲ್ಲ.ಮುಖ್ಯಮಂತ್ರಿ ಬೊಮ್ಮಾಯಿ,ಯಡಿಯೂರಪ್ಪ ಕೂಡ ಘಟನೆಯನ್ನು ಖಂಡಿಸಿದ್ದಾರೆ.ಇಷ್ಟಾದರೂ ಸಿದ್ದರಾಮಯ್ಯ ಕೊಡಗು ಚಲೋ ಮಾಡುತ್ತೇವೆ ಅಂತಾರೆ. ದಯಮಾಡಿ ಸಿದ್ದರಾಮಯ್ಯ ಅವರೇ ಮತ್ತೆ ಪರಿಶೀಲನೆ ಮಾಡಲಿ. ಇಂದಿರಾಗಾಂಧಿ ಮೇಲೆ ಸಾಕಷ್ಟು ಅಟ್ಯಾಕ್ ಆಗಿತ್ತು.ಮೂಗು ಒಡೆದಿತ್ತು, ಹಾಸನದಲ್ಲಿ ಸಭೆಯಲ್ಲಿದ್ದ ವೇಳೆ ಹಾವುಗಳನ್ನ ಬಿಟ್ಟಿದ್ದರು. ಚಿದಂಬರಂಗೆ ಪ್ರೆಸ್ ಕಾನ್ಫರೆನ್ಸ್ ಮಾಡುವಾಗ ಒಬ್ಬ ಶೂ ತೋರಿಸಿದ್ದ.ಇವೆಲ್ಲವೂ ಜನತಂತ್ರವ್ಯವಸ್ಥೆಯ ಜನಾಕ್ರೋಶದ ಉದಾಹರಣೆ.ರಾಜೀವ್ ಗಾಂಧಿ, ಇಂದಿರಾಗಾಂಧಿಯನ್ನೇ ಕೊಂದರು.ಮೊಟ್ಟೆ ಒಡೆದದ್ದು ಖಂಡನೀಯ ಎಂದರು.

ಮೊಟ್ಟೆ ವಿಚಾರ ನ್ಯಾಶನಲ್ ವಿಚಾರ ಆಗಿದೆ. ಪ್ರವಾಹದಲ್ಲಿ ಜನ ಸಮಸ್ಯೆ ಸಿಲುಕಿದ್ದಾರೆ.ಮೊಟ್ಟೆ ಎಸೆದದ್ದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಮಡಿಕೇರಿ ಚಲೋ ಹೋಗೋದು ನಿಮ್ಮಂತ  ನಾಯಕರಿಗೆ ಶೋಭಾಯಮಾನವಲ್ಲ.ರಾಜ್ಯದ ಸಮಸ್ಯೆಗಳನ್ನ ಪ್ರತಿಷ್ಠೆಯಾಗಿ ತಗೆದುಕೊಳ್ಳಿ.ಈ ಬಗ್ಗೆ ಸದನದಲ್ಲಿ  ಮಾತನಾಡಿ. ಪುಂಡ ಪೋಕರಿ ಮೊಟ್ಟೆ ಎಸೆದದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ.ಕೂಡಲೇ ಮಡಿಕೇರಿ ಚಲೋ ಕೈಬಿಡಿ ಎಂದರು.

ಮುಖ್ಯಮಂತ್ರಿಗಳು ಯಡಿಯೂರಪ್ಪ, ಎಸ್. ಎಂ. ಕೃಷ್ಣ ಮಧ್ಯಸ್ಥಿಕೆ ವಹಿಸಿ ಎರಡು ಕಡೆಯವರನ್ನೂ ಕೂರಿಸಿ ಮಾತನಾಡಿ.ನಾಡಿನಲ್ಲಿ ಶಾಂತಿ ನೆಲೆಸಲು ನಾಡಿನ ಪರವಾಗಿ ವಿನಮ್ರವಾಗಿ ಮನವಿ ಮಾಡುತ್ತಿದ್ದೇನೆ ಎಂದರು.

Advertisement

ದಂಡೆತ್ತಿ ಹೋಗಿ ಮಡಿಕೇರಿ ಚಲೋ ಮಾಡುವ ಬದಲು.ಕೊಡಗು ಅಭಿವೃದ್ಧಿ, ರಾಜಕೀಯ ಸ್ಥಾನಮಾನ ,ಇನ್ನೂ ಹಲವು ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡಲಿ‌.ಎಡರೂ ಪಕ್ಷದ ನಾಯಕರು, ಜೆಡಿಎಸ್ ನಾಯಕರು, ನಾಡಿನ ಪ್ರಮುಖ ಪಕ್ಷಗಳ ನಾಯಕರು ಒಂದು ಕಡೆ ಕುಳಿತು ಸಮಸ್ಯೆ ಬಗೆಹರಿಸಬೇಕು ಎಂದರು.

ಯಾರು ಯಾರಿಗೂ ದೊಡ್ಡವರಲ್ಲ. ಸಿದ್ದರಾಮಯ್ಯ ಹಿರಿಯರ ಮಾತನ್ನು ಕೇಳಬೇಕು. ನಾವು ಯಾರು ದೊಡ್ಡವರಲ್ಲ, ಸಿದ್ದರಾಮಯ್ಯ ಸಹ ಒಪ್ಪಿಕೊಳ್ಳಬೇಕು. ಅಂದೇ ಬಿಜೆಪಿ ಜನೋತ್ಸವ ಮಾಡುತ್ತಿದ್ದು, ಸವಾಲಿಗೆ ಸವಾಲು ಸರಿಯಲ್ಲ. ಇದನ್ನು ಅನುಭವಿಸುವವರು ಯಾರು? ಕೊಡಗಿನ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕೊಡವರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ. ಕಾಂಗ್ರೆಸ್ ನವರು ಅದನ್ನು ಮಾಡಿಲ್ಲ.ಕೊಡಗಿನಲ್ಲಿ ಹಲವು ಸಮಸ್ಯೆಗಳಿವೆ. ಶಾಂತಿಯನ್ನು ಯಾರೂ ಕದಡಬಾರದು. ಕೊಡಗಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪ್ರತ್ಯೇಕ ಪಾರ್ಲಿಮೆಂಟ್ ವ್ಯವಸ್ಥೆ ಮಾಡಬೇಕು. ಮೊಟ್ಟೆ, ಕೋಳಿ ಮಾಂಸ, ದೇವರು ಆಮೇಲೆ ಮಾತನಾಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next