Advertisement

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಭರ್ಜರಿ ಕೊಡುಗೆ

03:36 PM Feb 16, 2018 | |

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಎದುರಲ್ಲಿ ಮಂಡಿಸಿದ ಬಜೆಟ್‌ನಲ್ಲಿ  ವಿವಿಧ ಕ್ಷೇತ್ರಗಳಿಗೆ ಭರ್ಜರಿ ಕೊಡುಗೆಗಳನ್ನು  ಘೋಷಣೆ ಮಾಡಿದ್ದು, ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಬರೋಬ್ಬರಿ 2,281 ಕೋಟಿ ರೂ ಅನುದಾನವನ್ನು ಘೋಷಿಸಿದ್ದಾರೆ. 

Advertisement

ಅಲ್ಪಸಂಖ್ಯಾತ ವೃತ್ತಿ ನಿಗಮ ಸ್ಥಾಪನೆ ಮಾಡಿ ವೃತ್ತಿ ಪ್ರೋತ್ಸಾಹ ಮಾಡುವುದಾಗಿ ಘೋಷಿಸಿದ್ದು, ಮೆಕ್ಯಾನಿಕ್, ,ಹಣ್ಣು,ತರಕಾರಿ ಮಾರಾಟ, ಬೇಕರಿ, ಸೈಕಲ್‌, ವೆಲ್ಡಿಂಗ್ ಶಾಪ್, ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ ದುರಸ್ಥಿ ಕಾರ್ಯಗಳ ತರಬೇತಿಗೆ ಬ್ಯಾಂಕ್‌ ಸಾಲ ಮತ್ತು ತರಬೇತಿಗೆ 30 ಕೋಟಿ ರೂ ಮೀಸಲು ಇಡಲಾಗಿದೆ. 

 ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ, ಜೈನ ಮತ್ತು ಸಿಕ್ಬ್‌ ಸಮುದಾಯಕ್ಕೆ 80 ಕೋಟಿ ರೂ ಮೀಸಲು ಇಡಲಾಗಿದೆ. 

ಬೆಂಗಳೂರಿನ ಅರೆಬಿಕ್ ಕಾಲೇಜಿನ  ಆವರಣದಲ್ಲಿ ಐವಾನ್ ಎ ಅಶ್ರಫ್ ಸ್ಮಾರಕ ಭವನ ನಿರ್ಮಾಣಕ್ಕೆ  10 ಕೋಟಿ ರೂ ಮೀಸಲು.

ಬೆಂಗಳೂರು ಸೆಂಟ್ರಲ್‌ ವಿವಿಯಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರತಿಭಾ ಪುರಸ್ಕಾರ.

Advertisement

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರಿಗೆ 15 ಕೋಟಿ ರೂ ಕಾರ್ಯಾರಂಭ ಸಾಲ ಸೌಲಭ್ಯ.

ಮದರಸಗಳ ಆಧುನಿಕರಣ, ಶಿಕ್ಷಣಕ್ಕಾಗಿ 15 ಕೋಟಿ ರೂ ಮೀಸಲು.

ರಾಜ್ಯ ವಕ್ಫ್ ಪರಿಷತ್ತಿನ ಬೆಳ್ಳಿಹಬ್ಬಕ್ಕೆ 20 ಕೋಟಿ ರೂ ಮತ್ತು ವಿವಿಧ ಕಾರ್ಯಕ್ರಮಗಳ ಆಯೋಜನೆ.

ಮೈಸೂರಿನಲ್ಲಿ ಅಜೀಜ್‌ ಸೇಠ್‌ ಸ್ಮಾರಕಕ್ಕೆ 3 ಕೋಟಿ ರೂ.

ಅಲ್ಪಸಂಖ್ಯಾತ ಕಲ್ಯಾಣ ವಸತಿ ನಿಲಯದಲ್ಲಿರುವ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್‌ ಪಠ್ಯ ಪುಸ್ತಕಗಳು.

JEE, NEET, GATE, GMAT ಉಚಿತ ತರಬೇತಿ 

ಪುರಾತತ್ವ ಇಲಾಖೆ ಅಡಿಯಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗೆ 15 ಕೋಟಿ ರೂ.

ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ 800 ಕೋಟಿ ರೂ  ಕೊಡುಗೆ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next