Advertisement
ಸಂತಾಪ ಸಂದೇಶದಲ್ಲಿ ಡಾ. ಎಚ್.ಎಸ್. ದೊರೆಸ್ವಾಮಿ ಅವರು ವ್ಯಕ್ತಿತ್ವದ ಬಗ್ಗೆ ಮಾತಾನಾಡಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ ಭೂ ಕಬಳಿಕೆಯ ವಿರುದ್ಧದ ಅವರ ಚಟುವಟಿಕೆಗಳು ದೇಶ ವ್ಯಾಪ್ತಿ ಹಬ್ಬಿತ್ತು. ಪತ್ರಕರ್ತರಾಗಿಯೂ ಅವರು ಪ್ರಸಿದ್ಧರು.
Related Articles
Advertisement
ʼಗಾಂಧೀ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ಹೊರತು ವೈರತ್ವ ಇರಲಿಲ್ಲʼ ಎಂಬ ಅವರ ಮಾತು ಹೆಚ್ಚು ಸಮರ್ಪಕವಾಗಿತ್ತು. ದೊರೆಸ್ವಾಮಿ ಅವರು ಕೊರೋನಾ ಗೆದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಅತೀವ ದುಃಖದ ಸಂಗತಿ. ಸ್ವಾತಂತ್ರ್ಯ ಹೋರಾಟಗಾರ ಶಾಮಣ್ಣ ಅವರ ಮೊಮ್ಮಗರಾಗಿದ್ದ ದೊರೆಸ್ವಾಮಿ ಅವರು ಹೋರಾಟದ ಸಂಸ್ಕಾರ ಮತ್ತು ಬದ್ಧತೆಯ ಕುಟುಂಬದಲ್ಲಿ ಸಮಾಜಮುಖಿಯಾಗಿ ಬಾಲ್ಯದಿಂದ ಬೆಳೆದು ಬಂದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯ ನಂತರದಲ್ಲೂ ಸರ್ಕಾರಗಳನ್ನು ಪ್ರಶ್ನಿಸುವ ಮತ್ತು ಅಗತ್ಯ ಬಿದ್ದಾಗ ನಿರಂತರ ಹೋರಾಟ ನಡೆಸುತ್ತಾ ಬಂದವರು.
ಪವಿತ್ರವಾದ ಹೋರಾಟದ ಪರಂಪರೆಯನ್ನು ಕನ್ನಡ ನೆಲದಲ್ಲಿ ಮುನ್ನಡೆಸುತ್ತಾ ಹೋರಾಟವನ್ನು ಯಾವತ್ತೂ ದ್ವೇಷ ಆಗದಂತೆ ಆಚರಿಸಿಕೊಂಡು ಬಂದವರು. ಹೀಗಾಗಿ ಆಡಳಿತಗಾರರ ವಿರುದ್ಧ ಪ್ರತಿಭಟನೆ ಮತ್ತು ಸಲಹೆ ನೀಡುವ ಸಹೃದಯತೆಯನ್ನೂ ಪಾಲಿಸಿಕೊಂಡು ಬಂದವರು.
ಶಿಕ್ಷಕರಾಗಿ, ಪತ್ರಕರ್ತರಾಗಿಯೂ ಆದರ್ಶರಾಗಿದ್ದರಲ್ಲದೆ ನಾಡಿನ ವಿವೇಕವನ್ನು ನಿರಂತರವಾಗಿ ತಿದ್ದುತ್ತಾ, ವಿಸ್ತರಿಸುತ್ತಾ ಮಾರ್ಗದರ್ಶಕರಾಗಿದ್ದರು. ಇವರ ಸಾವು ನನಗೆ ಈ ಜೀವಮಾನದ ನೋವು. ಸಾರ್ಥಕ ಜೀವನ ನಡೆಸಿ ಯಾವತ್ತೂ ಅಳಿಸಲಾಗದ ಜನಪರ ಹೆಜ್ಜೆಗುರುತುಗಳನ್ನು ಕನ್ನಡ ಮಣ್ಣಿನಲ್ಲಿ ಬಿತ್ತಿ ಹೋಗಿದ್ದಾರೆ.
ಅವರು ಈ ನೆಲದಲ್ಲಿ ಬಿತ್ತಿರುವ ಹೋರಾಟದ ಬೀಜಗಳು, ಮುನ್ನಡೆಸಿಕೊಂಡು ಬಂದ ಹೋರಾಟ ಪರಂಪರೆಯನ್ನು ಈ ನಾಡು ಮುನ್ನಡೆಸುತ್ತದೆ. ಅತೀವ ದುಃಖದ ಸಂದರ್ಭ ನನಗೆ ಎಂದು ಸಂತಾಪ ಸೂಚಿಸಿದ್ದಾರೆ.