Advertisement

ಗುರು-ಶಿಷ್ಯರ ಭೇಟಿ: ಬಹಳ ದಿನಗಳ ನಂತರ ವಿಧಾನಸೌಧದಲ್ಲಿ ಸಿದ್ದರಾಮಯ್ಯ- ಮುನಿರತ್ನ ಪಟ್ಟಾಂಗ!

02:26 PM Dec 07, 2020 | keerthan |

ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದು ಆರಂಭವಾಗಿದೆ. ಬೆಳಿಗ್ಗೆ ಆರಂಭವಾದ ಕಲಾಪ ಮಧ್ಯಾಹ್ನ 2.30 ಕ್ಕೆ ಮುಂದೂಡುತ್ತಲೇ ವಿಧಾನಸೌಧದಲ್ಲಿ ಸ್ವಾರಸ್ಯಕರ ಸನ್ನಿವೇಶವೊಂದು ನಡೆದಿದೆ. ಅದುವೆ ಗುರು- ಶಿಷ್ಯರ ಭೇಟಿ, ಅಂದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನೂತನ ಶಾಸಕ ಮುನಿರತ್ನ ಭೇಟಿ.

Advertisement

ಸಿದ್ದರಾಮಯ್ಯ ಶಿಷ್ಯನಾಗಿದ್ದ ಮುನಿರತ್ನ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಈಗ ಇತಿಹಾಸ. ಬಿಎಸ್ ವೈ ಸರ್ಕಾರದಲ್ಲಿ ಮೊದಲ ಬಾರಿಗೆ ಇಂದು ಕಲಾಪಕ್ಕೆ ಕಾಲಿಟ್ಟ ಮುನಿರತ್ನ, ತಮ್ಮ ಹಳೆ ಗುರುವಿನ ಬಳಿ ಗಹನ ಚರ್ಚೆ ನಡೆಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಅಗತ್ಯವಿಲ್ಲ: ಡಿ ಕೆ ಶಿವಕುಮಾರ್

ಮುನಿರತ್ನ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಸಿದ್ದರಾಮಯ್ಯ ಟೀಕಿಸಿದ್ದರು. ಉಪಚುನಾವಣೆ ಸಂದರ್ಭದಲ್ಲಿ ಶಿಷ್ಯನ ವಿರುದ್ದ ಭಾರಿ ವಾಗ್ದಾಳಿಯನ್ನೇ ನಡೆಸಿದ್ದರು ಸಿದ್ದರಾಮಯ್ಯ. ಮುನಿರತ್ನ ತಾಯಿಗೆ ದ್ರೋಹ ಬಗೆದು ಹೋಗಿದ್ದಾರೆ ಎಂಬಿತ್ಯಾದಿಯಾಗಿ ಸಿದ್ದರಾಮಯ್ಯ ಟೀಕೆ ಮಾಡಿದ್ದರು.

Advertisement

 

 

ಆದರೆ ಕಲಾಪದಲ್ಲಿ ಗುರು-ಶಿಷ್ಯರ ಮುಖಾಮುಖಿಯಾಗಿದ್ದು, ಬಿಜೆಪಿ ಬೆಳವಣಿಗೆಗಳು, ಉಪಚುನಾವಣೆ ಗೆಲುವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತಾನಾಡುತ್ತಾ ಕುಳಿತರು. ಬಿಜೆಪಿಗೆ ಹೋದ ಬಳಿಕದ ಅನುಭವಗಳನ್ನು ಮುನಿರತ್ನ ಗುರು ಸಿದ್ದರಾಮಯ್ಯ ಬಳಿ ಹಂಚಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next