Advertisement
ಬಾದಾಮಿ, ವರುಣಾ, ಚಾಮುಂಡೇಶ್ವರಿ, ಚಾಮರಾಜಪೇಟೆ, ಕೋಲಾರ, ಹೆಬ್ಟಾಳ ಕ್ಷೇತ್ರ ಗಳ ಹೆಸರು ಪರಿಶೀಲನೆ ಯಲ್ಲಿತ್ತಾದರೂ ಅಂತಿಮವಾಗಿ ಕೋಲಾರದಲ್ಲಿ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಕೋಲಾರ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳು ಈಗಾಗಲೇ ಸ್ಪರ್ಧೆ ಬಯಸಿದ್ದು ಒಬ್ಬರಿಗೆ ಟಿಕೆಟ್ ಕೊಟ್ಟರೆ ಮತ್ತೂಬ್ಬರು ಬಂಡಾಯ ಏಳಬಹುದು. ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಾರೆ ಎಂಬುದು ಸ್ಥಳೀಯ ನಾಯಕರ ಅಭಿಪ್ರಾಯ.
ಮುನಿಯಪ್ಪ ನಡೆಯೇನು?:
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಿನಂತೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಮುನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾವ ನಿಲುವು ತಾಳಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಳಿಕ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಕೆ.ಎಚ್. ಮುನಿಯಪ್ಪ ಭಾರತ್ ಜೋಡೋ ಯಾತ್ರೆ ಯಲ್ಲೂ ಪಾಲ್ಗೊಂಡಿದ್ದರು. ಎಐಸಿಸಿ ರಚಿಸಿರುವ ಪ್ರಮುಖ ನಾಯಕರ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಜಿಲ್ಲೆ ಮಟ್ಟಿಗೆ ಬಂದರೆ ಸ್ಥಳೀಯ ನಾಯಕರ ಬಗ್ಗೆ ಅಸಮಾಧಾನವಿದೆ. ಹೀಗಾಗಿ, ಸಿದ್ದರಾಮಯ್ಯ ಸ್ಪರ್ಧೆ ವಿಷಯದಲ್ಲಿ ಮುನಿಯಪ್ಪ ಅವರ ನಿಲುವೂ ಪ್ರಮುಖವಾಗಲಿದೆ.
-ಎಸ್. ಲಕ್ಷ್ಮಿನಾರಾಯಣ